ಕನ್ನಡ ಕಲಿತು, ಹಾಡು ಹಾಡಿ ಮೆಚ್ಚುಗೆಗೆ ಪಾತ್ರರಾದ ಲೇಡಿ ಸಿಂಗಂ!

ಬೆಂಗಳೂರು: ನಗರದಲ್ಲಿ ಐಪಿಎಸ್ ಅಧಿಕಾರಿಯ ಕನ್ನಡ ಅಭಿಮಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಲೇಡಿ ಸಿಂಗಂ ಖ್ಯಾತಿಯ ಡಿಸಿಪಿ, ಐಪಿಎಸ್ ಅಧಿಕಾರಿ ಇಷಾ ಪಂತ್ ಅವರು ಕನ್ನಡ ಹಾಡು ಹಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಸದ್ಯ ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಯಾಗಿ ಇವರು ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡ ಬರದಿದ್ದರೂ, ಕನ್ನಡ ಭಾಷೆ ಕಲಿತು ಹಾಡು ಹಾಡಿದ್ದಾರೆ. ‘ಜೊತೆಯಲಿ ಜೊತೆಯಲಿ ಇರುವೆನು ಹೀಗೆ ಎಂದೂ’… ಸಾಂಗ್ ಹಾಡಿರೋ ಇವರು 2011ರ ಬ್ಯಾಚ್ ನ ಐಪಿಎಸ್ ಅಧಿಕಾರಿ.

2012ರಲ್ಲಿ ಎಲ್ಲಾ ಪ್ರೊಬೇಷನರ್ ಗಳನ್ನ ಹಿಂದಿಕ್ಕಿ ಬೆಸ್ಟ್ ಪ್ರೊಬೇಷನರ್ ಅನ್ನೋ ಪ್ರಶಸ್ತಿ ಪಡೆದಿದ್ದರು. ಮೂಲತಃ ಮಧ್ಯಪ್ರದೇಶದವರಾಗಿರುವ ಇವರು ಜಬ್ಬಲ್ ಪುರದಲ್ಲಿ ಎಎಸ್‍ಪಿಯಾಗಿದ್ದಾಗ ಡ್ರಗ್ ಮಾಫಿಯಾ, ಅಕ್ರಮ ಸಾರಾಯಿ ಮಾರಾಟದ ಅಡ್ಡೆಗಳನ್ನ ಮಟ್ಟ ಹಾಕಿದ್ದರು.

2019ರಿಂದ ಆಗ್ನೇಯ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಬರದಿದ್ರೂ ಕಲಿತು, ಸ್ವಷ್ಟವಾಗಿ ಹಾಗೂ ಇಂಪಾಗಿ ಹಾಡು ಹೇಳುವ ಮೂಲಕ ಇದೀಗ ಎಲ್ಲರ ಮನಗೆದ್ದಿದ್ದಾರೆ. ಸದ್ಯ ಇಶಾ ಪಂತ್ ಹಾಡು ಹಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *