ಗರ್ಭಿಣಿಯರಿಗೂ ಕಾಡ್ತಿದೆ ಕೊರೊನಾ ಭೀತಿ- ಮುನ್ನೆಚ್ಚರಿಕಾ ಕ್ರಮಗಳೇನು?

ಬೆಂಗಳೂರು: ಕೊರೊನಾ ಈಗ ಎಲ್ಲೆಲ್ಲೂ ಭೀತಿ ಹುಟ್ಟಿಸಿದೆ. ಈ ಮಹಾಮಾರಿಗೆ ವಿಶ್ವವೇ ಬೆಚ್ಚಿಬೀಳುತ್ತಿದೆ. ಅದರಲ್ಲೂ ಗರ್ಭಿಣಿಯರಲ್ಲಿ ಕೊರೊನಾ ಭಯವನ್ನುಂಟು ಮಾಡಿದ್ದು, ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.

ಪ್ರತಿ ಮಹಿಳೆಯ ಹೆಣ್ತನ ಪರಿಪೂರ್ಣವಾಗುವುದೇ ತಾಯಿಯಾದಾಗ. ಈ ಗರ್ಭಾವಸ್ಥೆಯ ಸಮಯದಲ್ಲೇ, ಕೊರೊನಾ ಭೀತಿ ಎದುರಾಗಿದೆ. ಬಹಳಷ್ಟು ಗರ್ಭಿಣಿಯರು, ತಮಗೆ ಹಾಗೂ ಹೊಟ್ಟೆಯಲ್ಲಿರುವ ಮಗುವಿಗೆ ಎಲ್ಲಿ ಕೊರೊನಾ ಬರುತ್ತೋ ಎನ್ನುವ ಆತಂಕದಲ್ಲಿ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ.

ಚೀನಾದಲ್ಲಿ ಗರ್ಭಿಣಿಯೊಬ್ಬಳು ಹೆರಿಗೆಯಾದ ತಕ್ಷಣವೇ ಹುಟ್ಟಿದ ನವಜಾತ ಶಿಶುವೊಂದಕ್ಕೆ ಕೊರೊನಾ ಪತ್ತೆಯಾಗಿದ್ದು ಆತಂಕವನ್ನುಂಟು ಮಾಡಿದೆ. ಜೊತೆಗೆ ಚಿಕ್ಕ ಮಕ್ಕಳು, ಕಂದಮ್ಮಗಳನ್ನು ಜೋಪಾನ ಮಾಡುವುದು ಕಷ್ಟ ಎಂದು ಬಾಣಂತಿಯರು ಹೇಳುತ್ತಿದ್ದಾರೆ.

ಗರ್ಭಿಣಿಯರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು..?
* ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು
* ರೋಗಗ್ರಸ್ತ ಜನರಿಂದ ದೂರವಿರಬೇಕು
* ಯಾರಾದರೂ ಕೆಮ್ಮು, ಸೀನು ಅಥವಾ ಜ್ವರದಿಂದ ಬಳಲುತ್ತಿದ್ದರೆ ಅವರಿಂದ ಸ್ವಲ್ಪ ದೂರ ಉಳಿಯುವುದು ಒಳ್ಳೆಯದು.

* ಆಗಾಗ ಸಾಬೂನಿನಿಂದ ಕೈಗಳು, ಕಾಲುಗಳನ್ನು ತೊಳೆದುಕೊಳ್ಳ ಬೇಕು ಎಂದು ಪೋರ್ಟಿಸ್ ಆಸ್ಪತ್ರೆಯ ನವಜಾತ ಶಿಶು ವೈದ್ಯರು ಡಾ. ಶ್ರೀನಾಥ್ ಮಣಿಕಂಠಿ ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಗರ್ಭಿಣಿಯರ ಸೈಕಾಲಜಿ ಮೇಲೆ ಕೊರೊನಾ ಪರಿಣಾಮ ಬೀರಿದ್ದು, ಈ ಮಹಾಮಾರಿಗೆ ಬೆಚ್ಚಿಬಿದ್ದಿದ್ದಾರೆ.

Comments

Leave a Reply

Your email address will not be published. Required fields are marked *