ನೆರೆಹೊರೆಯ 4 ಕಾಲಿನ ಸ್ನೇಹಿತರನ್ನು ಮರೆಯಬೇಡಿ: ಐಂದ್ರಿತಾ

ಬೆಂಗಳೂರು: ಕೊರೊನಾ ಎಫೆಕ್ಟ್ ನಿಂದ ಇಡೀ ರಾಜ್ಯವೇ ಲಾಕ್‍ಡೌನ್ ಆಗಿದೆ. ಇದರಿಂದ ಜನರಿಗೇ ಆಹಾರ ಸಿಗದೆ ಪರದಾಡುತ್ತಿದ್ದಾರೆ. ಹೀಗಿರುವಾಗ ನಟಿ ಐಂದ್ರಿತಾ ರೇ ಅವರು ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮರೆದಿದ್ದಾರೆ.

ಕೊರೊನಾ ವೈರಸ್‍ನಿಂದ ದೇಶವೇ ಸಂಕಷ್ಟಕ್ಕೆ ಸಿಲುಕಿದೆ. ಜನರು ಒಂದು ಮಟ್ಟಿಗೆ ಹೊರಬರಲು ಭಯಪಡುತ್ತಿದ್ದಾರೆ. ಇದರಿಂದ ಬೀದಿನಾಯಿಗಳು, ಬೀದಿ ಹಸುಕರುಗಳು ಆಹಾರವಿಲ್ಲದೇ ಪರದಾಡುತ್ತಿವೆ. ಈ ಪರಿಸ್ಥಿತಿಯಲ್ಲಿ ಕೆಲವರು ಬೀದಿನಾಯಿಗಳಿಗೆ ಅಹಾರ ನೀಡಿ ನೆರವಾಗುತ್ತಿದ್ದಾರೆ. ಈಗ ನಟಿ ಐಂದ್ರಿತಾ ರೇ ತಮ್ಮ ಅಕ್ಕಪಕ್ಕದ ಬೀದಿನಾಯಿಗಳಿಗೆ ಊಟ ಹಾಕಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಐಂದ್ರಿತಾ, ನಮ್ಮ ನೆರೆಹೊರೆಯಲ್ಲಿರುವ ನಾಲ್ಕು ಕಾಲಿನ ಸ್ನೇಹಿತರ ಬಗ್ಗೆ ನಾವು ಮರೆಯಬಾರದು. ಈ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮತ್ತು ಕೊರೊನಾದಿಂದ ಪ್ರಸ್ತುತ ದೇಶ ಲಾಕ್‍ಡೌನ್ ಆಗಿದೆ. ಈ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ಮತ್ತು ನೀರಿನ ಕೊರತೆ ಊಂಟಾಗಿದೆ. ಆದ್ದರಿಂದ ನೀವು ಮನೆಗೆ ಬೇಕಾದ ದಿನಸಿ ತರಲು ಹೊರಹೋದಾಗ ದಯವಿಟ್ಟು ನಾಯಿಗಳಿಗೆ ಆಹಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

https://www.instagram.com/p/B-B-id0lrY8/

ಮೊದಲಿನಿಂದಲೂ ಪ್ರಾಣಿ ಪ್ರಿಯೆ ಆಗಿರುವ ಐಂದ್ರಿತಾ ರೇ ಅವರಿಗೆ ಶ್ವಾನಗಳು ಎಂದರೆ ಅಚ್ಚುಮೆಚ್ಚು, ಈ ಕಾರಣದಿಂದಲೇ ರಾತ್ರಿ ವೇಳೆ ಯಾರಿಗೂ ತಿಳಿಯದ ಹಾಗೇ ಮಾಸ್ಕ್ ಧರಿಸಿ ಬೀದಿನಾಯಿಗಳಿಗೇ ಆಹಾರ ಹಾಕಿಬಂದಿದ್ದಾರೆ. ಐಂದ್ರಿತಾ ರೇ ಅವರ ಮಾನವೀಯತೆ ನೋಡಿ ಫಿದಾ ಅಗಿರುವ ಅವರ ಅಭಿಮಾನಿಗಳು, ನಿಮಗೆ ಇರುವ ಕಾಳಜಿ ನೋಡಿ ಬಹಳ ಖುಷಿ ಆಯ್ತು ಮೇಡಂ, ಹೀಗೆ ನಿಮ್ಮ ಕೆಲಸವನ್ನು ಮುಂದುವರಿಸಿ ಎಂದು ಕಮೆಂಟ್ ಮಾಡಿದ್ದಾರೆ.

https://www.instagram.com/p/B-TkHHulXZs/

ಐಂದ್ರಿತಾ ಅವರ ರೀತಿಯಲ್ಲೇ ನಟಿ ಸಂಯುಕ್ತ ಹೊರನಾಡು ಅವರು ಕೂಡ ನಾಯಿಗಳಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದೊಂದು ವಾರದಿಂದ ನಾಯಿಗಳು ಆಹಾರವಿಲ್ಲದೆ ಪರದಾಡುತ್ತಿರುವುದನ್ನು ಕಂಡು ಬಹಳ ನೋವಾಗಿತ್ತು. ಹೀಗಾಗಿ ಕೆಲವು ನಾಯಿಗಳಿಗೆ ನಾನು ಆಹಾರ ತಿನ್ನಿಸಿದೆ. ಅಲ್ಲದೆ ಟಾಸ್ಕ್ ಫೋರ್ಸ್‍ನಲ್ಲಿ ಭಾಗವಾಹಿಸಿದ್ದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ಈ ನಿಟ್ಟಿನಲ್ಲಿ ನಮ್ಮ ತಂಡ ಫುಲ್ ಆ್ಯಕ್ಟಿವ್ ಆಗಿದ್ದು, ತುಂಬಾ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದರು.

Comments

Leave a Reply

Your email address will not be published. Required fields are marked *