PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್‌ ದಾಖಲು

ಬೆಂಗಳೂರು: ನಗರದ ಹಲವೆಡೆ PayCM ಪೋಸ್ಟರ್‌ ಅಂಟಿಸಿದನ್ನು ನೋಡಿ ಸಿಎಂ ಬೊಮ್ಮಾಯಿ(Basavaraj Bommai) ಗರಂ ಆದ ಬೆನ್ನಲ್ಲೇ ಎಫ್‌ಐಆರ್‌ ದಾಖಲಾಗಿದೆ.

ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಪೊಲೀಸರ ವಿರುದ್ಧ  ಗರಂ ಆಗಿದ್ದಾರೆ.  ಗರಂ ಆದ ಬೆನ್ನಲ್ಲೇ ಪೊಲೀಸರು ಪೋಸ್ಟರ್‌ಗಳನ್ನು ತೆರವು ಮಾಡಿದ್ದಾರೆ.

ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಕೇಂದ್ರ ವಿಭಾಗದಲ್ಲಿ ಒಂದು ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಸಂಬಂಧಪಟ್ಟ ಡಿಸಿಪಿಗಳಿಂದ ಮಾಹಿತಿ ಕೇಳಲಾಗಿದೆ. ಸದ್ಯಕ್ಕೆ ಒಂದು ಎಫ್‌ಐಆರ್ ಮಾತ್ರ ಆಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ(Pratap Reddy) ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ – ಬಿಜೆಪಿಯಿಂದ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಭಿಯಾನ

ಪೋಸ್ಟರ್ ಅಂಟಿಸಿದವರ ಪತ್ತೆಗೆ ಮುಂದಾಗುತ್ತಿರುವ ಪೊಲೀಸರು ಈಗ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್(40 Percent Commission) ಆರೋಪ ಮಾಡಿ ಬೆಂಗಳೂರಿನ ಹಲವು ಕಡೆ ಸಿಎಂ ಬೊಮ್ಮಾಯಿ ಫೋಟೊ ಪ್ರಕಟಿಸಿ ಕಾಂಗ್ರೆಸ್‌ ಕ್ಯೂ ಆರ್ ಕೋಡ್ ಮಾದರಿಯ ಪೋಸ್ಟರ್ ಅಂಟಿಸಿ ಅಭಿಯಾನ ಆರಂಭಿಸಿತ್ತು. ಇದನ್ನೂ ಓದಿ: 40 ಪರ್ಸೆಂಟ್‌ ಸರ್ಕಾರ ಅಣಕ – ಪೇಟಿಎಂ ಮಾದರಿಯಲ್ಲಿ ʻಪೇ ಸಿಎಂʼ ಪೋಸ್ಟರ್‌ ವೈರಲ್‌

ಸಿಎಂ ನಿವಾಸದ ರಸ್ತೆ, ಸಿದ್ದರಾಮಯ್ಯ ಸರ್ಕಾರಿ ನಿವಾಸದ ರಸ್ತೆ ಸೇರಿದಂತೆ ಹಲವು ಕಡೆ ಅಂಟಿಸಲಾಗಿತ್ತು. ಈಗ ಬಿಬಿಎಂಪಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಪೇ ಸಿಎಂ ಪೋಸ್ಟರ್‌ಗಳನ್ನು ತೆರವು ಮಾಡಿದ್ದಾರೆ.

ಕರ್ನಾಟಕ ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಪೋಸ್ಟರ್‌ ಅಂಟಿಸುವುದನ್ನು ನಿಷೇಧಿಸಲಾಗಿದೆ. ಆರೋಪ ಸಾಬೀತಾದರೆ ಗರಿಷ್ಠ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *