ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪೌರಕಾರ್ಮಿಕರ ಹಣ ಕೀಳ್ತಿದ್ದ ಅಧಿಕಾರಿಗಳ ವಿರುದ್ಧ ಎಫ್‍ಐಆರ್

ಬೆಂಗಳೂರು: ಕಸ ಗುಡಿಸಿ ನಗರವನ್ನು ಸ್ವಚ್ಛವಾಗಿ ಇಡುವ ಪೌರಕಾರ್ಮಿಕರ ಬಳಿ ಕೆಲ ಅಧಿಕಾರಿಗಳು ಹಣ ಕೀಳುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈಗ ಪಬ್ಲಿಕ್ ಟಿವಿ ವರದಿಗೆ ಫಲ ಸಿಕ್ಕಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ಮತ್ತು ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.

ಪೌರಕಾರ್ಮಿಕರಿಂದ ತಿಂಗಳಿಗೆ 80 ಲಕ್ಷ ಹಫ್ತಾ ವಸೂಲಿಯಾಗುವುದನ್ನು ಕಂಡು ಬಿಬಿಎಂಪಿ ಮೇಯರ್, ಕಮಿಷನರ್ ಹಾಗೂ ವಿರೋಧ ಪಕ್ಷ ಬೆಚ್ಚಿಬಿದ್ದಿದೆ. ಹಣ ವಸೂಲಿ ಮಾಡುತ್ತಿದ್ದ ಅಧಿಕಾರಿಗಳ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಈ ಸಂಬಂಧ ನಗರದ 198 ವಾರ್ಡ್ ಗಳಲ್ಲೂ ತನಿಖೆ ಮಾಡಲು ಸೂಚಿಸಿದ್ದು, ಸಂಪಂಗಿರಾಮನಗರ ವಾರ್ಡ್ ನ ಕಿರಿಯ ಆರೋಗ್ಯಾಧಿಕಾರಿ ಶ್ರೀನಿವಾಸ್ ಅನ್ನು ಕೆಲಸದಿಂದ ವಜಾಗೊಳಿಸಿ ಕಮಿಷನರ್ ಅನಿಲ್ ಕುಮಾರ್ ಆದೇಶಿಸಿದ್ದಾರೆ.

ಈ ವಿಚಾರವಾಗಿ ಭ್ರಷ್ಟರ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದ್ದು, ಇತ್ತ ಪಬ್ಲಿಕ್ ಟಿವಿ ಮುಂದೆ ಸತ್ಯ ಬಾಯಿಬಿಟ್ಟಿದಕ್ಕೆ ಇಂದು ಪೌರಕಾರ್ಮಿಕರ ಬಯೋಮೆಟ್ರಿಕ್ ಹಾಜರಾತಿಯನ್ನು ಕದಿರೇನಹಳ್ಳಿ ವಾರ್ಡ್‍ನಲ್ಲಿ ತಡೆಹಿಡಿದಿದ್ದರು. ಇದನ್ನೂ ತನಿಖೆಗೆ ಒಳಪಡಿಸಿದ್ದು, ಪೌರಕಾರ್ಮಿಕರ ದುಡ್ಡು ವಸೂಲಿ ಹೀನಾಯ, ಅವಮಾನೀಯ ಕೃತ್ಯ ಎಂದು ಮೇಯರ್ ಮತ್ತು ಕಮಿಷನರ್ ಬೇಸರ ಹೊರಹಾಕಿದರು.

ಈ ಮೂಲಕ ಪೌರಕಾರ್ಮಿಕರ ಸುಲಿಗೆ ಮಾಡುತ್ತಿದ್ದ ಕೆಲ ಅಧಿಕಾರಿಗಳಿಗೆ ವಜಾದ ಶಿಕ್ಷೆಯಾಗಿದೆ. ಇದು ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಅಗಿದ್ದು, ಈ ಹಣ ವಸೂಲಿ ದಂಧೆಯ ಬಗ್ಗೆ ಬಿಬಿಎಂಪಿ ಮಾಸಿಕ ಸಭೆಯಲ್ಲೂ ಪ್ರಸ್ತಾಪ ಮಾಡಲಾಗಿದೆ.

Comments

Leave a Reply

Your email address will not be published. Required fields are marked *