ಬಂಧನದ ಭೀತಿಯಲ್ಲಿ ಬಿಗ್ ಬಾಸ್ ಭುವನ್..!

ಬೆಂಗಳೂರು: ಖಾಸಾಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿ ಭುವನ್ ಅವರು ಬಂಧನದ ಭೀತಿಯಲ್ಲಿ ಇದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಭುವನ್ ತನ್ನ ಸಹ ಸ್ಪರ್ಧಿ ಪ್ರಥಮ್ ಅವರ ಜೊತೆ ಜಗಳವಾಡಿದ್ದರು. ಈ ವೇಳೆ ಪ್ರಥಮ್, ಭುವನ್ ಮನೆಗೆ ಹೋಗಿ ಅವರಿಗೆ ಕಚ್ಚಿದ್ದರು. ಇದಾದ ಬಳಿಕ ಇಬ್ಬರು ಒಬ್ಬರ ಮೇಲೊಬ್ಬರು ಪ್ರಕರಣ ದಾಖಲಿಸಿಕೊಂಡರು. ಆದರೆ ಈಗ ಭುವನ್‍ಗೆ ಸಂಕಷ್ಟ ಎದುರಾಗಿದೆ.

ನ್ಯಾಯಾಲಯ ಭುವನ್‍ಗೆ ಜಾಮೀನು ರಹಿತ ವಾರೆಂಟ್ ನೀಡಿದೆ. 15 ಬಾರಿ ಸಮನ್ಸ್ ನೀಡಿದರೂ ಭುವನ್ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸೆಷೆನ್ಸ್ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ. ಸದ್ಯ ಬಂಧನದ ಭೀತಿಯಲ್ಲಿರುವ ಭುವನ್ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಏನಿದು ಪ್ರಕರಣ?
ಧಾರಾವಾಹಿ ಚಿತ್ರೀಕರಣದ ವೇಳೆಯಲ್ಲಿ ಆನ್ ಶೂಟ್ ಮತ್ತೆ ಆಫ್ ಶೂಟ್‍ನಲ್ಲಿ ಸಂಜನಾ, ಭುವನ್ ಜೊತೆ ಚೆನ್ನಾಗಿ ಮಾತಾನಾಡುತ್ತಿದ್ದಳು. ಆದರೆ ನನ್ನ ಜೊತೆ ಆನ್ ಶೂಟ್ ಮತ್ತೆ ಆಫ್ ಶೂಟ್ ನಲ್ಲಿ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಕೈ ಹಿಡಿದು ಮಾತಾನಾಡುವ ದೃಶ್ಯದ ಚಿತ್ರೀಕರಣ ಇತ್ತು. ಆನ್ ಶೂಟ್ ನಲ್ಲಿ ಕೈ ಹಿಡಿದು ಮಾತನಾಡಿಸಿದ್ರೂ ಆಕೆ ನನ್ನನ್ನು ತಿರಸ್ಕಾರ ಮಾಡುತ್ತಿದ್ದಳು. ಮತ್ತೆ ಆಫ್ ಶೂಟ್ ನಲ್ಲಿ ಸಹ ಅದೇ ರೀತಿ ಮಾಡುತ್ತಿದ್ದಳು. ಆದ್ದರಿಂದ ಆಕೆಯನ್ನು ನಾನು ಬೈದಿದ್ದೆ. ಆಗ ಭುವನ್ ಬಂದು ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಟ್ಟು ಮಾತನಾಡು ಅಂತ ಹೇಳಿದ್ದನು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದಿತ್ತು ಎಂದು ಪ್ರಥಮ್ ತಿಳಿಸಿದ್ದರು.

https://www.youtube.com/watch?v=snEC0MwHyII

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *