ಪಕ್ಷ ಬಿಟ್ಟು ಬಂದವರಿಗೆ ಅದೃಷ್ಟ – ಸ್ಥಾಯಿ ಸಮಿತಿ ರೇಸ್‍ನಲ್ಲಿರುವ ಸದಸ್ಯರು ಯಾರು?

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 12ನೇ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಪಕ್ಷ ಬಿಟ್ಟು ಪಕ್ಷಕ್ಕೆ ಹಾರಿದವರಿಗೆ ಅಧಿಕಾರಿ ಸಿಗೋದು ಬಹುತೇಕ ಖಚಿತವಾಗುತ್ತಿದೆ.

ಜ.18ರಂದು ಸ್ಥಾಯಿ ಸಮಿತಿ ಚುನಾವಣೆ ನಿಗದಿಯಾಗಿದೆ. ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದವರಿಗೆ ಸ್ಥಾನ ನೀಡಲು ಚಿಂತನೆ ನಡೆದಿದೆ. ಶಾಸಕರು ರಾಜೀನಾಮೆ ಕೊಟ್ಟ ಬಳಿಕ ಬಿಜೆಪಿ ಕಡೆ ಹಲವು ಕಾರ್ಪೊರೇಟರ್ ಗಳು ಒಲವು ತೋರಿದ್ದರು. ಅವರಿಗೆ ಸದ್ಯ ಅಧಿಕಾರ ಒಲಿಯೊ ಸಾಧ್ಯತೆ ದಟ್ಟವಾಗಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನಿಂದ್ರ ಕುಮಾರ್, ಬಿಜೆಪಿ ಕಾರ್ಪೊರೇಟರ್ ಗಳಿಗೂ ಆದ್ಯತೆ ಕೊಡಲಾಗುತ್ತೆ. ಜೊತೆಗೆ ಪಕ್ಷಕ್ಕೆ ಬೆಂಬಲ ನೀಡಿದ ಬೇರೆ ಪಕ್ಷದಿಂದ ಬಂದ ಕಾರ್ಪೊರೇಟರ್ ಗಳಿಗೂ ಸ್ಥಾನ ಸಿಗಲಿದೆ ಎಂದರು.

ಸ್ಪರ್ಧೆಯಲ್ಲಿ ಯಾರಿದ್ದಾರೆ?
ದೇವದಾಸ್, ಮಂಜುಳಾ ನಾರಾಯಣಸ್ವಾಮಿ, ರಾಜಣ್ಣ, ಚಂದ್ರಪ್ಪ ರೆಡ್ಡಿ, ಮಮತಾ ವಾಸುದೇವ್, ಎನ್ ರಮೇಶ್, ನಾಗರತ್ನ ರಾಮಮೂರ್ತಿ, ಸರಳ ಮಹೇಶ್, ಶಶಿಕಲಾ, ಸಂಗಾತಿ ವೆಂಕಟೇಶ್ ಈ ಹೆಸರುಗಳು ಸದ್ಯ ಸ್ಥಾಯಿ ಸಮಿತಿ ರೇಸ್‍ನಲ್ಲಿದ್ದಾರೆ.

ವಿಶೇಷವೆಂದರೆ ಮೇಯರ್, ಉಪಮೇಯರ್, ಆಡಳಿತ ಪಕ್ಷ ನಾಯಕರ ಕ್ಷೇತ್ರಗಳಿಗೆ ಸ್ಥಾಯಿ ಸಮಿತಿ ಇಲ್ಲ ಎಂಬ ಸ್ಪಷ್ಟ ಸಂದೇಶವೂ ಹೊರಬಿದ್ದಿದೆ. ಈ ಅಧ್ಯಕ್ಷ ಸ್ಥಾನ ವಿಚಾರವಾಗಿ ಬಿಜೆಪಿ ನಾಯಕರು ಶುಕ್ರವಾರ ಅಂತಿಮ ಸುತ್ತಿನ ಚರ್ಚೆ ನಡೆಸಲಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕು ಎಂದು ತೀರ್ಮಾನ ಕೈಗೊಳ್ಳಲಿದ್ದಾರೆ.

Comments

Leave a Reply

Your email address will not be published. Required fields are marked *