ಮಾಜಿ ಕ್ರಿಕೆಟಿಗ ಕುಂಬ್ಳೆಗೂ ತಟ್ಟಿದ ಬೆಂಗಳೂರು ಬಂದ್ ಬಿಸಿ – ಬಿಎಂಟಿಸಿಯಲ್ಲಿ ಪ್ರಯಾಣ

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble ಅವರಿಗೂ ಬೆಂಗಳೂರು ಖಾಸಗಿ ಸಾರಿಗೆ ಚಾಲಕರ ಒಕ್ಕೂಟದ ಬಂದ್ (Bengaluru Bandh) ಬಿಸಿ ತಟ್ಟಿದೆ.

ಬೆಂಗಳೂರು ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಬೆಂಗಳೂರು ಬಂದ್ ಹಿನ್ನೆಲೆ ಕ್ಯಾಬ್ ಇಲ್ಲದಿರುವ ಮಾಹಿತಿ ನೀಡಿದ್ದಾರೆ. ಇದರಿಂದ ಬಿಎಂಟಿಸಿ (BMTC) ವಾಯುವಜ್ರ ಬಸ್ ಏರಿ ಅವರು ಮನೆ ಕಡೆ ತೆರಳಿದ್ದಾರೆ. ಇದನ್ನೂ ಓದಿ: ಮುಂಜಾನೆಯೇ ಕೊಲೊಂಬೊದಲ್ಲಿ ಮಳೆ – ಏನಾಗಲಿದೆ ರಿಸರ್ವ್ ಡೇ ಭವಿಷ್ಯ?

ಈ ಬಗ್ಗೆ ಎಕ್ಸ್‌ನಲ್ಲಿ ಸೆಲ್ಫಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ಅದರಲ್ಲಿ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ದೊಡ್ಡ ಬ್ಯಾಗ್‌ಗಳೊಂದಿಗೆ ಅವರು ಇರುವುದನ್ನು ನೋಡಬಹುದಾಗಿದೆ.

ಬಸ್‌ನಲ್ಲಿ ಕುಂಬ್ಳೆ ನಿಂತುಕೊಂಡೆ ಪ್ರಯಾಣ ಮಾಡಿರುವುದು ಬಸ್‌ಗಳಿಗೆ ಇದ್ದ ಡಿಮ್ಯಾಂಡ್ ನಿದರ್ಶನ ಎಂಬಂತಿದೆ. ಕ್ಯಾಬ್‌ಗಳಿಲ್ಲದ ಕಾರಣ ಬಹುತೇಕ ಪ್ರಯಾಣಿಕರು ಬಸ್‌ನತ್ತ ಮುಖ ಮಾಡಿದ್ದಾರೆ. ಕ್ಯಾಬ್‌ಗಳ ಬಂದ್ ಹಿನ್ನಲೆ ಯಲ್ಲಿ ಏರ್‌ಪೋರ್ಟ್‌ನಿಂದ ಬೆಂಗಳೂರಿಗೆ ಹೆಚ್ಚುವರಿ ವಾಯುವಜ್ರ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]