ಬೆಂಗಳೂರಿಗರೇ ಗಮನಿಸಿ, ಇಂದು ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಆಟೋ ಮುಷ್ಕರ

ಬೆಂಗಳೂರು: ನಗರದಲ್ಲಿ ಅಕ್ರಮ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು (Bike Taxi) ನಿಷೇಧಿಸುವಂತೆ ಪಟ್ಟು ಹಿಡಿದಿರುವ ಆಟೋ ಚಾಲಕರು (Autorickshaw Drivers) ಮತ್ತು ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆಯನ್ನು ಸ್ಥಗಿತಗೊಳಿಸಿ  ಮುಷ್ಕರ (Strike) ಆರಂಭಿಸಿದ್ದಾರೆ.

ಸೋಮವಾರ ಮಧ್ಯರಾತ್ರಿಯವರೆಗೆ ಬೆಂಗಳೂರಿನಲ್ಲಿ (Bengaluru) ಆಟೋರಿಕ್ಷಾ ಬಂದ್‌ ನಡೆಸಲು ನಿರ್ಧರಿಸಿದ್ದಾರೆ. ಸುಮಾರು 2 ಲಕ್ಷಕ್ಕೂ ಅಧಿಕ ಆಟೋಗಳು ಬಂದ್‌ಗೆ ಬೆಂಬಲ ನೀಡಿವೆ. ಆಟೋ ಸೇವೆ ಬಂದ್‌ನಿಂದಾಗಿ ಪ್ರಯಾಣಿಕರು ನಗರದಲ್ಲಿ ಸಂಚರಿಸಲು ಬಿಎಂಟಿಸಿ ಬಸ್‌, ಮೆಟ್ರೋ, ಖಾಸಗಿ ವಾಹನ, ಟ್ಯಾಕ್ಸಿ ಹಾಗೂ ಓಲಾ, ಊಬರ್ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗಿದೆ. ಇದನ್ನೂ ಓದಿ: Bengaluru Mysuru Expressway ಮಳೆಯ ಅವಾಂತರಕ್ಕೆ ಇದೇ ಕಾರಣ – ಕೇಂದ್ರ ಸಚಿವಾಲಯ ಸ್ಪಷ್ಟೀಕರಣ

ಬೈಕ್ ಟ್ಯಾಕ್ಸಿಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಆಟೋ ಚಾಲಕರು ಕೊಟ್ಟ ಗಡುವು ಮುಗಿದಿದೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆ ನಂತರ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಸೋಮವಾರ ಬೆಳಗ್ಗೆ 11ಕ್ಕೆ ಸಂಗೊಳ್ಳಿ ಕ್ರಾಂತಿವೀರ ರಾಯಣ್ಣ ರೈಲ್ವೆ ನಿಲ್ದಾಣದ ಬಳಿಯಿಂದ ಚಾಲಕರು ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದಾಗಿ ಆಟೋ ಚಾಲಕರ ಸಂಘಟನೆಗಳ ಒಕ್ಕೂಟ ತಿಳಿಸಿದೆ.

ಆಟೋ ಚಾಲಕರ ಮುಷ್ಕರದ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಎಂಟಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಬಸ್ ಕಾರ್ಯಾಚರಣೆಗೆ ಮುಂದಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ನೀಡಲು ತಯಾರಿ ನಡೆಸಿದೆ. ಮೆಜೆಸ್ಟಿಕ್, ಕೆ.ಆರ್‌ ಮಾರುಕಟ್ಟೆ, ಶಾಂತಿನಗರ, ಶಿವಾಜಿನಗರ, ಯಶವಂತಪುರ, ಸೇರಿ ಪ್ರಮುಖ ನಿಲ್ದಾಣಗಳಿಂದ ಹೆಚ್ಚಿನ ಕಾರ್ಯಾಚರಣೆಗೆ ಬಿಎಂಟಿಸಿ ಮುಂದಾಗಿದೆ.

Comments

Leave a Reply

Your email address will not be published. Required fields are marked *