ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

ಕೋಲ್ಕತ್ತಾ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆ ಸಂಭ್ರಮದಲ್ಲಿ ಯಾರಿಗೂ ಊಟ ಕಮ್ಮಿಯಾಗಬಾರದು ಎಂದು ಊಟವನ್ನು ಹೆಚ್ಚೇ ಮಾಡಿಸುತ್ತಾರೆ. ಆದರೆ ಈ ವೇಳೆ ಹೆಚ್ಚು ಊಟ ವ್ಯರ್ಥವಾಗುವ ಸಂಭವವಿರುತ್ತೆ. ಕೋಲ್ಕತ್ತಾದಲ್ಲಿ ಮಹಿಳೆಯೊಬ್ಬರು ಮದುವೆಯ ಉಡುಪು ಧರಿಸಿ ರೈಲ್ವೇ ನಿಲ್ದಾಣದಲ್ಲಿ ಬಡವರಿಗೆ ಊಟ ಹಂಚುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಛಾಯಾಗ್ರಾಹಕ ನಿಲಂಜನ್ ಮೊಂಡಲ್ ಅವರು ಫೇಸ್‍ಬುಕ್ ಪೇಜ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮಹಿಳೆಯ ಹೆಸರು ಪಾಪಿಯ ಕರ್ ಎಂದು ಬರೆದುಕೊಂಡಿದ್ದಾರೆ. ಪಾಪಿಯ ಕರ್ ಅವರು ಡಿಸೆಂಬರ್ 5 ರಂದು ತನ್ನ ಸಹೋದರನ ಮದುವೆಯಲ್ಲಿ ಉಳಿದ ಆಹಾರವನ್ನು ಕೋಲ್ಕತ್ತಾ ಉಪನಗರ ರೈಲು ನಿಲ್ದಾಣವಾದ ರಾಣಾಘಾಟ್ ಜಂಕ್ಷನ್‍ನಲ್ಲಿ ಹಂಚಿದ್ದಾರೆ. ಇದನ್ನೂ ಓದಿ: ಮಗನ ಮದುವೆಗೆ 4 ಕೆಜಿ, 280 ಗ್ರಾಂ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!

ಮದುವೆಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವ ಪಾಪಿಯ ಕರ್ ಅವರು ಪೇಪರ್ ಪ್ಲೇಟ್‍ಗಳಲ್ಲಿ ಸ್ವತಃ ಆಹಾರವನ್ನು ನೀಡುವುದನ್ನು ನಾವು ಫೋಟೋಗಳಲ್ಲಿ ನೋಡಬಹುದು. ಇವರು ದಾನ ಮಾಡುತ್ತಿದ್ದ ಊಟದಲ್ಲಿ ದಾಲ್, ರೊಟ್ಟಿ, ಸಬ್ಜಿ ಮತ್ತು ಅನ್ನವೂ ಇತ್ತು.

ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮಹಿಳೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಉತ್ತಮ ಕೆಲಸ, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *