500 ರೂ. ಸಾಲ ವಾಪಸ್ ಕೊಡದಿದ್ದಕ್ಕೆ ಹೊಡೆದು ಕೊಂದೇ ಬಿಟ್ಟ!

ಕೋಲ್ಕತ್ತಾ: 500 ರೂ. ಸಾಲವನ್ನು ಹಿಂದಕ್ಕೆ ಕೊಡದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಪಶ್ಚಿಮ ಬಂಗಾಳ (West Bengal) ದ ಮಲ್ದಾ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಬನ್ಮಾಲಿ ಪ್ರಮಾಣಿಕ ಎಂದು ಗುರುತಿಸಲಾಗಿದೆ. ಬನ್ಮಾಲಿ ತನ್ನ ಪಕ್ಕದ ಮನೆ ನಿವಾಸಿ ಪ್ರಫುಲ್ಲಾ ರಾಯ್ ಬಳಿಯಿಂದ 500 ರೂ. ಸಾಲವಾಗಿ ಪಡೆದಿದ್ದರು. ಆದರೆ ಇದನ್ನು ನಿಗದಿತ ಸಮಯದೊಳಗೆ ಹಿಂದಿರುಗಿಸುವಲ್ಲಿ ಬನ್ಮಾಲಿ ವಿಫಲರಾದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಜಗಳ ನಡೆದಿತ್ತು.

ಬನ್ಮಾಲಿ ಬಳಿ ಹಣ (500 rs) ಕೇಳಲು ರಾಯ್ ಭಾನುವಾರ ಸಂಜೆ ಬಂದಿದ್ದನು. ಆದರೆ ಈ ಸಂದರ್ಭದಲ್ಲಿ ಬನ್ಮಾಲಿ ಮನೆಯಲ್ಲಿ ಇರಲಿಲ್ಲ. ನಂತರ ಪಕ್ಕದ ಟೀ ಶಾಪ್ ಬಳಿ ಬನ್ಮಾಲಿ ಇರುವುದನ್ನು ಗಮನಿಸಿದ ರಾಯ್ ಅಲ್ಲಿಗೆ ತೆರಳಿದ್ದಾನೆ. ಅಂತೆಯೇ ಹಣ ಕೊಡುವಂತೆ ಕೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಬನ್ಮಾಲಿಗೆ ಬಿದಿರಿನ ಕೋಲಿನಲ್ಲಿ ಮನಬಂದಂತೆ ಥಳಿಸಿದ್ದಾನೆ. ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದವನ ಪ್ರಶ್ನೆ ಮಾಡಿದ ಸಂಬಂಧಿಯನ್ನೇ ಕೊಂದ- ಮತ್ತೋರ್ವನಿಗೆ ಗಾಯ

ಈ ಸಂಬಂಧ ಪ್ರತಿಕ್ರಿಯಿಸಿದ ಬನ್ಮಾಲಿ ಸಹೋದರ, ನನ್ನ ಅಣ್ಣ ಗೆಳೆಯರ ಜೊತೆ ಟೀ ಕುಡಿಯುತ್ತಾ ಕುಳಿತಿದ್ದನು. ಈ ವೇಳೆ ಏಕಾಏಕಿ ಬಂದ ರಾಯ್, ಹಿಗ್ಗಾಮುಗ್ಗ ಥಳಿಸಿದ್ದಾನೆ. ರಾಯ್ ತಲೆಗೆ ಹೊಡೆದ ಏಟಿಗೆ ಬನ್ಮಾಲಿ ಕುಸಿದು ಬಿದ್ದಿದ್ದಾನೆ. ಪ್ರಜ್ಞೆ ಬಂದ ಬಳಿಕ ಆತ ಮನೆಗೆ ನಡೆದುಕೊಂಡು ಹೋಗಿದ್ದಾನೆ ಎಂದರು.

ಇದಾದ ಮರು ದಿನ ಬನ್ಮಾಲಿ ರಕ್ತ ವಾಂತಿ ಮಾಡಲು ಆರಂಭಿಸಿದ್ದಾನೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದೇವೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ಬನ್ಮಾಲಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ವಿರುದ್ಧ ಬನ್ಮಾಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *