ಮತದಾನ ಜಾಗೃತಿಗಾಗಿ ಆಟೋ ಓಡಿಸಿದ ಬಳ್ಳಾರಿ ಡಿಸಿ

ಬಳ್ಳಾರಿ: ಮತದಾನ ಪ್ರಮಾಣ ಹೆಚ್ಚಳ ಹಾಗೂ ನೈತಿಕ ಮತದಾನಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾಧಿಕಾರಿ ಆಟೋ ಓಡಿಸುವ ಮೂಲಕ ಮತದಾನ ಜಾಗೃತಿಗೆ ಚಾಲನೆ ನೀಡಿದರು.

ಮತದಾನದ ಮಹತ್ವ ಸಾರುವ ಉದ್ದೇಶದಿಂದ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ 70 ಆಟೋಗಳು ಪಾಲ್ಗೊಂಡಿದ್ದವು. ಅವುಗಳಲ್ಲಿ ಒಂದು ರಿಕ್ಷಾವನ್ನು ಡಿ.ಸಿ ಡಾ. ರಾಮಪ್ರಸಾತ್ ಮನೋಹರ್ ತೆಗೆದುಕೊಂಡಿದ್ದು, ಬಳಿಕ ಅದನ್ನು ಓಡಿಸಿ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಿದರು.

ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ನಗರದ ಗಡಗಿ ಚನ್ನಪ್ಪ ವೃತ್ತದ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಆಟೋ ಓಡಿಸಿದ್ದಾರೆ. ಅವರ ಜೊತೆ ಸಿಇಓ ನಿತೀಶ್ ಹಾಗೂ ಎಸ್.ಪಿ ಲಕ್ಷಣ ನಿಂಬರಗಿ ಸಾಥ್ ನೀಡಿದ್ದು ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *