ಕೊರೊನಾ ಎಫೆಕ್ಟ್ – ಮದ್ಯ ಸಿಗದೇ ಊಟ ಬಿಟ್ಟು ಓರ್ವ ಸಾವು

ಬಳ್ಳಾರಿ: ಕೊರೊನಾ ಎಫೆಕ್ಟ್ ನಿಂದ ಕುಡಿಯಲು ಮದ್ಯ ಸಿಗದೇ ಮಾನಸಿಕ ಖಿನ್ನತೆಗೊಳಗಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಕಮಕ ದುರ್ಗಮ್ಮ ದೇವಸ್ಥಾನ ಬಳಿ ನಡೆದಿದೆ.

ಮೃತನನ್ನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ತೆಕ್ಕಲಕೋಟೆಯ ನಿವಾಸಿ ಶಶಿಧರ್ ಎಂದು ಗುರುತಿಸಲಾಗಿದ್ದು, ಹಬ್ಬಕ್ಕಾಗಿ ಬಳ್ಳಾರಿಗೆ ಬಂದಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಕೊರೊನಾ ಹರಡುವ ಭೀತಿಯಿಂದ ಎಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿದೆ. ಈ ಕಾರಣದಿಂದ ಮದ್ಯೆ ಸಿಗದೇ ಊಟ ಬಿಟ್ಟು ಸಾವನ್ನಪ್ಪಿದ್ದಾನೆ.

ಲಾಕ್‍ಡೌನ್‍ಗೂ ಮುನ್ನವೇ ಮನೆಗಳಲ್ಲಿ ಸಂಗ್ರಹಿಸಿಕೊಂಡಿದ್ದ ಮದ್ಯ ಸಹ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಗ್ರಾಮದ ಎಲ್ಲ ಕಡೆ ಮದ್ಯಕ್ಕಾಗಿ ಓಡಾಡಿದ್ದಾನೆ. ಎಲ್ಲಿಯೂ ಮದ್ಯ ಸಿಕ್ಕಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಕಳೆದ ನಾಲ್ಕು ದಿನಗಳಿಂದ ಊಟವನ್ನು ಬಿಟ್ಟ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *