ಆಕೆಯನ್ನು ಬಿಜೆಪಿಗೆ ಕರೆದಿದ್ರೆ ನನ್ನಿಬ್ಬರು ಮಕ್ಕಳು ಹಾಳಾಗಲಿ -ಹೆಬ್ಬಾಳ್ಕರ್‌ಗೆ ಸಾಹುಕಾರ್ ಟಾಂಗ್

ಬೆಳಗಾವಿ: ನಾನು ಆಕೆಯನ್ನು ಬಿಜೆಪಿಗೆ ಕರೆದಿದ್ರೆ ನನ್ನ ಇಬ್ಬರು ಮಕ್ಕಳು ಹಾಳಾಗಲಿ ಎಂದು ಹೇಳುವ ಮೂಲಕ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಟಾಂಗ್ ನೀಡಿದ್ದಾರೆ.

ಇಂದು ವೀರಶೈವ, ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ರಮೇಶ್ ಜಾರಕಿಹೊಳಿ ಹೈದರಾಬಾದ್‍ನಲ್ಲಿ ಕರೆದು ಬಿಜೆಪಿ ಸೇರುವಂತೆ ಕೇಳಿಕೊಂಡಿದ್ದರು ಎಂಬ ಹೆಬ್ಬಾಳ್ಕರ್ ಆರೋಪಕ್ಕೆ ಟಾಂಗ್ ನೀಡಿದರು. ನಾನು ಆಕೆಯನ್ನು ಹೈದರಾಬಾದ್‍ಗೆ ಕರೆದಿದ್ದರೆ ನನ್ನ ಇಬ್ಬರು ಮಕ್ಕಳು ಹಾಳಾಗಲಿ ಎಂದು ತಿರುಗೇಟು ನೀಡಿದರು.

ಇದೇ ವೇಳೆ, ನನ್ನ ಬಗ್ಗೆ ಟೀಕೆ ಮಾಡುತ್ತಿರುವ ಎಲ್ಲರಿಗೂ 6 ತಾರೀಕು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಬಹಿರಂಗ ಪಡಿಸುತ್ತೇನೆ. ಮಾಜಿ ಸಿಎಂ ಸಿದ್ದರಾಮಯ್ಯ ವೈಯಕ್ತಿಕ ಟೀಕೆ ಮಾಡಿದ್ದಾರೆ. ನಮ್ಮ ಬಳಿಯೂ ಬಾಂಬ್ ಇದೆ ಎಂದು ಹೇಳಿದರು. ನಂತರ ನಾನು ಹೆಬ್ಬಾಳ್ಕರ್ ಅವರನ್ನು ಹೈದರಾಬಾದ್ ಸಭೆಗೆ ಕರೆದಿಲ್ಲ. ನಾನು ಆಕೆಯನ್ನು ಕರೆದಿದ್ರೆ ನನ್ನ ಇಬ್ಬರು ಮಕ್ಕಳು ಹಾಳಾಗಲಿ ಎಂದು ಸವಾಲ್ ಹಾಕಿದರು.

1985 ರಲ್ಲಿ ನಾನು ಒಂದು ಸಾವಿರ ಮತದಿಂದ ಸೋತೆ. 40 ಸಾವಿರ ಮತದಿಂದ ಡಿಕೆಶಿ ಸೋತರು. ಆದರೆ ಈಗ ಡಿಕೆಶಿ ದೊಡ್ಡ ಲೀಡರ್. ಪ್ರಭಾಕರ್ ಕೋರೆ ಮತ್ತು ರಮೇಶ್ ಜಾರಕಿಹೊಳಿ ಒಂದಾದರೆ ಉಳಿಗಾಲ ಇಲ್ಲ ಎಂದು ಟಿಕೆಟ್ ತಪ್ಪಿಸಿದರು. ಆದರೆ ಈಗ ಸಮಯ ಬಂದಿದೆ ಇಬ್ಬರು ಒಂದಾಗಿದ್ದೇವೆ. ನಮ್ಮ ಗೆಲುವಿಗೆ ವೀರಶೈವ ಲಿಂಗಾಯತ ಸಮಾಜ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.

ನಮ್ಮ ಜನರು ಮತ ಯಾರಿಗೆ ಹಾಕ್ತಿರಾ ಎಂದು ಕೇಳಿದರೆ ಕೈಗೆ ಎನ್ನುತ್ತಾರೆ. ಮಾನಸಿಕವಾಗಿ ಹಿರಿಯರು, ಮಹಿಳೆಯರಲ್ಲಿ ನಾನು ಕಾಂಗ್ರೆಸ್ ಅಂತ ಇದೆ. ನಾನು 30 ವರ್ಷದಿಂದ ಕಾಂಗ್ರೆಸ್ ನಲ್ಲಿ ಇದ್ದು ಇನ್ನೂ ದೂರವಾಗಿಲ್ಲ. ಮತ ಹಾಕುವ ಮೊದಲು ಯುವಕರು ಸರಿಯಾಗಿ ಮಾಹಿತಿ ಕೊಡಬೇಕು. ಮತ ಹಾಕೋ ಮೊದಲು ಫೋಟೋ ನೋಡಬೇಕು. ಲಖನ್ ಸಾಹುಕಾರ್ ಸಹ ನನ್ನ ಹಾಗೇ ಕಾಣಿಸುತ್ತಾನೆ. ಫೋಟೋ ಜತೆಗೆ ಕಮಲ ಹೂ ನೋಡಿ ಮತಹಾಕಲು ಹೇಳಿ. ಮುಸ್ಲಿಂ ಸಮಾಜದ ಜನ ನನ್ನ ನೋಡಿ ಮತ ಹಾಕಿ ಎಂದು ಮತದಾರರಿಗೆ ಹೇಳಿದರು.

Comments

Leave a Reply

Your email address will not be published. Required fields are marked *