ಕೋಲಾರ: ಪ್ರತಿಯೊಬ್ಬ ಭಾರತೀಯ ಪ್ರಜೆ 18 ವರ್ಷ ತುಂಬಿದ ನಂತರ ಮತದಾನದ ಹಕ್ಕನ್ನ ಪಡೆಯುತ್ತಾರೆ. ಅದಕ್ಕಾಗಿ ಚುನಾವಣಾ ಆಯೋಗ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದೆ. ಆದ್ರೆ ಕೋಲಾರದ ಆ ಹಳ್ಳಿಯಲ್ಲಿ ಆಧಾರ್, ಪಡಿತರ, ಜಮೀನು, ಬಂಧು ಬಳಗ ಎಲ್ಲಾ ಇದ್ರು ಮತದಾರರ ಪಟ್ಟಿಗೆ ಸೇರಿಸಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ರಾಜ್ಯದಲ್ಲಿ 2018 ರ ವಿಧಾನಸಭೆ ಚುನಾವಣೆ ಕಾವು ಸಮೀಪಿಸುತ್ತಿದ್ದು, ಚುನಾವಣಾ ಆಯೋಗ ಕೂಡ ಸಾಕಷ್ಟು ತಯಾರಿಗಳನ್ನ ಮಾಡಿಕೊಳ್ಳುತ್ತಿದೆ. ಮತದಾನ ಪಟ್ಟಿಯಿಂದ ಹಿಡಿದು ಸಾರ್ವತ್ರಿಕ ಚುನಾವಣೆ ಸಿದ್ದತೆಯಲ್ಲಿದೆ. ಆದ್ರೆ ಕೋಲಾರ ತಾಲೂಕಿನ ಮಂಜಿಲಿ ಗ್ರಾಮದಲ್ಲಿ ಬಹುತೇಕರಿಗೆ ಮತದಾನ ಪಟ್ಟಿಗೆ ಸೇರುವ ಅರ್ಹತೆ, ಅದಕ್ಕೆ ಬೇಕಾದ ಪೂರಕ ದಾಖಲೆಗಳಿದ್ರು ಮತದಾರನ ಪಟ್ಟಿಗೆ ಮಾತ್ರ ಸೇರಿಸಲಾಗುತ್ತಿಲ್ಲ. ಸ್ಥಳೀಯ ಚುನಾವಣೆ ಅಧಿಕಾರಿಯಾಗಿ ನೇಮಿಸಿರುವ ವೆಂಕಟೇಶ್ ಎಂಬ ಶಿಕ್ಷಕನ ಕುತಂತ್ರ ಹಾಗೂ ಗ್ರಾಮದಲ್ಲಿನ ದ್ವೇಷದ, ರಾಜಕೀಯದಿಂದ ಇಷ್ಟೆಲ್ಲಾ ಬೇಜವಬ್ದಾರಿಯಿಂದ ನಡೆದುಕೊಳ್ಳಲಾಗುತ್ತಿದೆ ಅಂತಾ ಗ್ರಾಮದ ಯುವಕ ಮನೋಹರ್ ಹೇಳುತ್ತಾರೆ.

ಗ್ರಾಮದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಾಗೂ ಬಿಎಲ್‍ಓ ಅವರ ಧೊರಣೆ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಚುನಾವಣೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದ ಅದೆಷ್ಟೋ ಜನರನ್ನ ಗ್ರಾಮದಲ್ಲಿ ಮತ ಪಟ್ಟಿಗೆ ಸೇರಿಸಿಲ್ಲ, ಇನ್ನೂ ಕೆಲವರನ್ನ ತೆಗೆಯಲಾಗಿದೆ. ವಿಶೇಷತೆ ಎಂದ್ರೆ ಕಳೆದ ಬಾರಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ 2 ಮತಗಳ ಅಂತರದಿಂದ ಗ್ರಾಮದ ರಘುಪತಿ ಎಂಬವರು ಪಂಚಾಯತ್ ಸದಸ್ಯರಾಗಿ ವಿಜಯ ಶಾಲಿಯಾಗಿದ್ದಾರೆ. ಇಲ್ಲಿ ಒಂದೆರೆಡು ಮತಗಳೆ ನಿರ್ಣಾಯಕವಾಗಿದೆ, ಇದೆಲ್ಲಾ ರಾಜಕೀಯ ಹಾಗೂ ದ್ವೇಷದಿಂದ ಬಿಎಲ್‍ಓ ವೆಂಕಟೇಶ್ ಮತದಾರರ ಪಟ್ಟಯಿಂದ ಕೈ ಬಿಡುವ ಹಾಗೂ ಸೇರಿಸಿಕೊಳ್ಳುವಲ್ಲಿ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
https://youtu.be/YEll1DdE79k

Leave a Reply