160 ಕೆಜಿ ತೂಕ ಹೊಂದಿರೋ 20ರ ಬುದ್ಧಿಮಾಂದ್ಯ ಯುವಕನಿಗೆ ಬೇಕಿದೆ ತೂಕ ಇಳಿಸೋ ಚಿಕಿತ್ಸೆ

ಬಳ್ಳಾರಿ: ಇಲ್ಲಿನ ಹೊಸಪೇಟೆ ಟ್ರಾಫಿಕ್ ಠಾಣೆಯ ಪೇದೆ ಕೆ.ಶಾಷಾವಲಿಯವರ ಏಕೈಕ ಪುತ್ರ ಫಜ್ಮಾನ್ ಅಹ್ಮದ್. 20 ವರ್ಷದ ಫಜ್ಮಾನ್ ಅಹ್ಮದ್ ಹುಟ್ಟುತ್ತಲೇ ಬುದ್ಧಿಮಾಂದ್ಯ. ಫಜ್ಮಾನ್ ಆಟಿಸಂ ತೊಂದರೆಯಿಂದ ಬಳಲುತ್ತಿದ್ದಾನೆ. 160 ಕೆಜಿ ತೂಕ ಹೊಂದಿರುವ ಈತನ ಹೆತ್ತವರಿಗೆ ಅವನ ತೂಕವೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಇನ್ನು ಫಜ್ಮಾನ್ ಊಟಕ್ಕೆ ಮಿತಿಯೇ ಇಲ್ಲ, ಕೇಳಿದಷ್ಟು ಊಟ ಕೊಡದಿದ್ದರೆ ಕುಟುಂಬದವರಿಗೆ ಈತ ಕೋಡೋ ಕಾಟ ಅಷ್ಟಿಷ್ಟಲ್ಲ. ಹೀಗಾಗಿ ಈತನ ತೂಕ ಇಳಿಸಲು ಸಹಾಯ ಬೇಕಿದೆ ಅಂತ ಹೆತ್ತವರು ಹೇಳುತ್ತಾರೆ.

ಹೊಸಪೇಟೆಯ ಸಾಧ್ಯ ಬುದ್ಧಿಮಾಂದ್ಯ ಶಾಲೆಯಲ್ಲಿ ಓದುತ್ತಿರುವ ಫಜ್ಮಾನ್ ಅಹ್ಮದ್, ಎಲ್ಲ ಮಕ್ಕಳಂತೆ ಓದು ಬರಹ ಮಾಡ್ತಾನೆ. ಕಂಪ್ಯೂಟರ್ ನಲ್ಲಿ ಇಂಗ್ಲಿಷ್ ಟೈಪಿಂಗ್ ಸಹ ಸ್ಪೀಡಾಗಿ ಮಾಡೋ ಈತ 2013ರ ಸ್ಪೇಷಲ್ ಓಲಿಂಪಿಕ್ ಗೇಮ್ಸ್ ನ ಶಟಲ್ ಬ್ಯಾಡ್ಮಿಂಟನ್ ಗೇಮ್ಸ್ ನಲ್ಲಿ ಗೋಲ್ಡ್ ವಿನರ್ ಕೂಡಾ ಹೌದು. ಅಷ್ಟೆ ಅಲ್ಲದೇ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲೂ ಸಹ ಭಾಗವಹಿಸಿ ಫಜ್ಮಾನ್ ಬಂಗಾರದ ಪದಕ ಪಡೆದಿದ್ದಾನೆ.

ಫಜ್ಮಾನ್‍ಗೆ ಒಂದೆಡೆ ತನ್ನ ತೂಕವೇ ಬಲು ಭಾರವಾದ್ರೆ ಮತ್ತೊಂದೆಡೆ ಊಟದ್ದೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಕೇಳಿದಷ್ಟು ಊಟ ಕೊಡದಿದ್ದರೆ ಹೆತ್ತವರನ್ನೇ ಹೊಡೆದು ಗಲಾಟೆ ಮಾಡುತ್ತಾನೆ. ಫಜ್ಮಾನ್ ತಂದೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಈತನನ್ನೂ ನಿಯಂತ್ರಿಸುವುದ ಸಾಕಷ್ಟು ಕಷ್ಟವಾಗುತ್ತಿದೆ. ಇನ್ನೂ ಈತನಿಗೆ ತೂಕ ಇಳಿಸುವ ಚಿಕಿತ್ಸೆ ನೀಡಿದ್ರೆ, ಈತನೂ ಎಲ್ಲ ಮಕ್ಕಳಂತೆ ಆಟವಾಡುತ್ತಾ ಓದಲು ಸಹಾಯವಾಗುತ್ತದೆ.

ಫಜ್ಮಾನ್ ಅಹ್ಮದ್‍ನ ವಯಸ್ಸಿಗೆ ತಕ್ಕಂತೆ ತೂಕವಾಗಲು ಪ್ರಕೃತಿ ಚಿಕಿತ್ಸಾಲಯ ಕೇಂದ್ರದಲ್ಲಾಗಲಿ ಇಲ್ಲವೇ ಯಾವಾದಾದ್ರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರೆ ಈ ಬುದ್ದಿಮಾಂದ್ಯ ಬಾಲಕನ ತೂಕವನ್ನು ಇಳಿಸಬಹುದಾಗಿದೆ. ಬೆಳಕು ಪ್ರಯತ್ನ ಈ ಯುವಕನ ಬದುಕಲ್ಲಿ ಬೆಳಕು ತರುತ್ತಾ ಕಾದು ನೋಡಬೇಕಿದೆ.

https://www.youtube.com/watch?v=B8ZvJdQVyj8

Comments

Leave a Reply

Your email address will not be published. Required fields are marked *