ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್

ಬೆಳಗಾವಿ: ಅಧಿವೇಶನದ ಪ್ರಾರಂಭದಲ್ಲೇ ಉತ್ತರ ಕನ್ನಡದ ಬಗ್ಗೆ ಚರ್ಚೆ ಆಗಬೇಕಿತ್ತು. ಇನ್ನು ಮುಂದೆ ಉತ್ತರ ಕನ್ನಡದ ಬಗ್ಗೆ ಚರ್ಚೆ ಮಾಡೋದಾದರೆ ಅಧಿವೇಶನದಲ್ಲಿ ಮಾಡಲಿ. ಜಾತ್ರೆ ಮಾಡುವುದಕ್ಕೆ ಅಧಿವೇಶನ ಮಾಡುವುದು ಬೇಡ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯನವರ ಇಂದಿನ ನಡವಳಿಕೆ, ಕೂಗಾಟ ಅಸಹ್ಯಕರವಾಗಿತ್ತು ಎಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದ ಹಿನ್ನೆಲೆಯಲ್ಲಿ ಯತ್ನಾಳ್ ಹೇಳಿಕೆ ನೀಡಿದರು.

ಉತ್ತರ ಕನ್ನಡದ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚೆ ಆಗಲಿಲ್ಲ. ವಿರೋಧ ಪಕ್ಷದವರೂ ಚರ್ಚೆ ಮಾಡಲಿಲ್ಲ. ಆಡಳಿತ ಪಕ್ಷದವರು ಸರಿಯಾಗಿ ಉತ್ತರ ನೀಡಲು ಬಿಡಲಿಲ್ಲ. ಸಿಎಂ ಮೊದಲ 5 ದಿನ ಚರ್ಚೆ ಮಾಡಲು ಹೇಳಬೇಕಿತ್ತು ಎಂದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಬಿಟ್ಟರೆ ಬಿಜೆಪಿ ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

ಸಿದ್ದರಾಮಯ್ಯ ನಿನ್ನೆ ಬಿಲ್ ಪಾಸ್ ಬಳಿಕ ಹತಾಶರಾಗಿದ್ದಾರೆ. ಹಿರಿಯ ಕಾಂಗ್ರೆಸ್ ಸದಸ್ಯರೊಬ್ಬರು ಕಾಗದ ಹರಿದು ಹಾಕಿ ಸೋನಿಯಾ ಗಾಂಧಿಗೆ ಫೋಟೋ ತೋರಿಸಲು ಹೋಗಿದ್ದಾರೆ. ಈ ಅಧಿವೇಶನ ಜಾತ್ರೆ ಆದಂತೆ ಆಗಿದೆ. ನಮಗೂ ಹತಾಶೆಯಾಗಿದೆ. ಇದೇ ರೀತಿಯಾದರೆ ಸುವರ್ಣ ಸೌಧ ಮುಂದೆ ಗೋಲಗುಮ್ಮಟ ತರ ಪ್ರವಾಸಿ ಮಂದಿರ ಆಗುತ್ತದೆ ಎಂದು ವ್ಯಂಗ್ಯ ಮಾಡಿದರು.

ಕೆಲವರಿಗೆ ಸದನದಲ್ಲಿ ಭಾಷಣ ಮಾಡಿ ಹೋಗುವ ಸಂಸ್ಕೃತಿ ಇದೆ. ಸಿದ್ದರಾಮಯ್ಯ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಈ ರೀತಿಯಾಗಿ ಮಾಡಿದ್ದಾರೆ. ಸುವರ್ಣಸೌಧ ಕೇವಲ 15 ದಿನಕ್ಕೆ ಮಾತ್ರ ಉಪಯೋಗವಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಉತ್ತರ ಕನ್ನಡದ ಸಮಸ್ಯೆಗಳ ಬಗ್ಗೆ ಚರ್ಚೆ ಆಗದಿದ್ದರೆ ನಾವೂ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆಯ ಮಾತನ್ನು ಆಡಿದರು. ಇದನ್ನೂ ಓದಿ: ಕಾಂಗ್ರೆಸ್ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಿದೆ: ಗೋವಿಂದ ಕಾರಜೋಳ

Comments

Leave a Reply

Your email address will not be published. Required fields are marked *