ಮೂರು ತಿಂಗ್ಳ ಮೊದಲೇ ತೀರ್ಪು ಬಂದಿದ್ದರೆ ಚೆನ್ನಾಗಿತ್ತು – ಮಾಧುಸ್ವಾಮಿ

ಬೆಳಗಾವಿ: ಮೂರು ತಿಂಗಳ ಮೊದಲೇ ತೀರ್ಪು ಬಂದಿದ್ದರೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗುತಿತ್ತು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.

ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ಪ್ರಕಟವಾಗಿದ್ದು, ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ. ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಚುನಾವಣೆ ನಿರ್ಬಂಧ ಹೇರಲು ಬರುವುದಿಲ್ಲ, ಅದೇ ರೀತಿ ತೀರ್ಪು ಬಂದಿದೆ ಎಂದರು. ಇದನ್ನೂ ಓದಿ: ನಮ್ಮ ರಾಜಕೀಯ ಭವಿಷ್ಯ ಮುಗಿಯುತ್ತೆ ಎಂದವರಿಗೆ ಸುಪ್ರೀಂ ಆದೇಶವೇ ತಕ್ಕ ಉತ್ತರ – ವಿಶ್ವನಾಥ್

ಅನರ್ಹರು ಮರಳಿ ಗೆಲುವು ದಾಖಲಿಸುವ ತನಕ ಸಾವಿಂಧಾನಿಕ ಹುದ್ದೆ ಅಲಂಕರಿಸಲು ಬರುವುದಿಲ್ಲ. ಉಪಚುನಾವಣೆಯಲ್ಲಿ ಗೆದ್ದ ಬಳಿಕ ಅವರೆಲ್ಲರಿಗೂ ಸಾಂವಿಧಾನಿಕ ಹುದ್ದೆ ಸಿಗಲಿದೆ. ಮೂರು ತಿಂಗಳ ಮೊದಲೇ ತೀರ್ಪು ಬಂದಿದ್ದರೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗುತಿತ್ತು. ತೀರ್ಪು ತಡವಾಗಿ ಬಂದಿದ್ದರಿಂದ ಅನರ್ಹರಿಗೆ ಸ್ವಲ್ಪ ಕಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಅಕ್ರಮ ಸರ್ಕಾರ ಎಂಬುದು ಸಾಬೀತಾಗಿದೆ: ದಿನೇಶ್ ಗುಂಡೂರಾವ್

ಬಿ ಫಾರ್ಮ್ ಕೊಟ್ಟ ಮೇಲೇಯೇ ಅನರ್ಹರು ಬಿಜೆಪಿ ಸೇರಲಿದ್ದಾರೆ. ಪಕ್ಷದ ಹಿರಿಯ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಅನರ್ಹರನ್ನು ಜತೆಗೆ ಕರೆದೊಯ್ಯುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಟಿಕೆಟ್ ಸಿಗದ ಬಿಜೆಪಿ ಅಸಮಾಧಾನಿತರು ರಾಜಿ ಆಗುತ್ತಾರೆ. ಅಸಮಾಧಾನಿತರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತೇವೆ. ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಸ್ಪೀಕರ್ ಷಡ್ಯಂತ್ರಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ: ಸಿಎಂ ಬಿಎಸ್‍ವೈ

Comments

Leave a Reply

Your email address will not be published. Required fields are marked *