ಸಿಇಒ ಆತ್ಮಹತ್ಯೆ ಪ್ರಕರಣ- ಖುಷಿಯಿಂದ ಸಾಯೋದು ಹೇಗೆಂದು ವೀಡಿಯೋ ನೋಡಿದ್ದ ಅಧಿಕಾರಿ!

ಬೆಳಗಾವಿ: ದಂಡು ಮಂಡಳಿ ಸಿಇಒ (Dandu Board CEO) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ (Police) ಪ್ರಾಥಮಿಕ ತನಿಖೆ ವೇಳೆ ಆಘಾತಕಾರಿ ವಿಷಯವೊಂದು ಬಯಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಆನಂದದಿಂದ ಸಾಯುವುದು ಹೇಗೆಂದು ವೀಡಿಯೋ ವೀಕ್ಷಣೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ತಮಿಳುನಾಡು ಮೂಲದ ಸಿಇಒ ಕೆ.ಆನಂದ್ (40) ಬೆಳಗ್ಗೆ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆದಾಗ ಬೆಡ್ ರೂಮ್‍ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಇದನ್ನೂ ಓದಿ: ಬೆಳಗಾವಿಯ ದಂಡು ಮಂಡಳಿ CEO ನಿಗೂಢ ಸಾವು – ಮನೆಯಲ್ಲಿ ಡೆತ್‌ ನೋಟ್‌, ವಿಷದ ಬಾಟಲಿ ಪತ್ತೆ

ಬೆಡ್ ರೂಮ್‍ನಲ್ಲಿ ಅವರು ಆನ್ ಮಾಡಿದ್ದ ಮ್ಯೂಸಿಕ್ ಸಹ ಹಾಗೆಯೇ ಇತ್ತು. ಸಾಯುವ ಮುನ್ನ ಅವರು ತಮ್ಮ ಕೋಣೆಯಲ್ಲಿ ಖುಷಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ಲ್ಯಾಪ್‍ಟಾಪ್‍ನಲ್ಲಿ ಬಹಳ ಹೊತ್ತಿನವರೆಗೂ ವೀಡಿಯೋಗಳನ್ನು ಸರ್ಚ್ ಮಾಡಿ ನೋಡಿದ್ದರು. ಒಬ್ಬ ವ್ಯಕ್ತಿ ನಗುನಗುತಾ ಡ್ಯಾನ್ಸ್ ಮಾಡುತ್ತಾ ಪ್ರಾಣ ಬಿಡುವ ವೀಡಿಯೋ ಸರ್ಚ್ ಮಾಡಿದ್ದಾರೆ. ಹೇಗೆ ಆನಂದದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವುದನ್ನು ಸರ್ಚ್ ಮಾಡಿದ್ದಾರೆ.

ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡುತ್ತಾ ಆತ್ಮಹತ್ಯೆಗೆ ಶರಣಾದ್ರಾ? ಎನ್ನುವ ಅನುಮಾನ ಕೂಡ ಪೊಲೀಸರಿಗೆ ಎದುರಾಗಿದೆ ಎಂಬುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗಂಡನನ್ನು ಕಳೆದುಕೊಂಡಿದ್ದ ಡಿಸಿ ಕಚೇರಿ ಎಸ್‍ಡಿಎ ಆತ್ಮಹತ್ಯೆ!