ಅತ್ಯಾಚಾರಗೈದು ಬಾಲಕಿಯ ಕೊಲೆ – ಕಾಮುಕನಿಗೆ ಗಲ್ಲು ಶಿಕ್ಷೆ

ಚಿಕ್ಕೋಡಿ: ಅಪ್ರಾಪ್ತ ಬಾಲಕಿಯ (minor girl) ಮೇಲೆ ಅತ್ಯಾಚಾರ (Rape) ಎಸಗಿ ಕೊಲೆ ಮಾಡಿದ್ದ ಕಾಮುಕನಿಗೆ ಬೆಳಗಾವಿಯ ಪೋಕ್ಸೊ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಿಂದ (POCSO Court) ಗಲ್ಲು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ.

2017 ರಲ್ಲಿ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯಲ್ಲಿ ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರಗೆ(32) ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಪೇಜರ್‌ ಸ್ಫೋಟ ಬೆನ್ನಲ್ಲೇ ಚೀನಿ ಸಿಸಿಟಿವಿ ಬಳಕೆ ನಿಯಂತ್ರಿಸಲು ಮುಂದಾದ ಕೇಂದ್ರ

ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಪುಸಲಾಯಿಸಿ ಕರೆದೊಯ್ದಿದ್ದ. ನಂತರ ಕಬ್ಬಿನ ಗದ್ದೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ಮತ್ತು 45 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೇ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಬಾಲಕಿ ಪೋಷಕರಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ FIR ದಾಖಲು – ಕಟೀಲ್‌ ಎ4, ವಿಜಯೇಂದ್ರ ಎ5