ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ

ಬೆಳಗಾವಿ: ಉಕ್ರೇನ್‌ನಲ್ಲಿ ಬೆಳಗಾವಿ ಯೋಧರೊಬ್ಬರ ಪುತ್ರಿ ಸಿಲುಕಿಕೊಂಡು ಪರದಾಡುತ್ತಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಮಗಳನ್ನ ರಕ್ಷಿಸುವಂತೆ ಪ್ರಧಾನಿ ಮೋದಿಗೆ ಯೋಧ ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ಫಾಲ್ಸ್‌ನ ನಿವಾಸಿ ರಜೀಯಾ ಬಾಗಿ ಉಕ್ರೇನ್‍ನಲ್ಲಿ ಎಂಬಿಬಿಎಸ್ ದ್ವೀತಿಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉಕ್ರೇನಿನಲ್ಲಿ ಸಿಲುಕಿರುವ ಮಗಳನ್ನು ರಕ್ಷಿಸುವಂತೆ ಪ್ರಧಾನಿಗೆ ಸೈನಿಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

ವಿದ್ಯಾರ್ಥಿನಿ ರಜೀಯಾ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮನ್ನು ಆದಷ್ಟು ಬೇಗ ಸ್ಥಳಾಂತರ ಮಾಡಬೇಕು. ಉಕ್ರೇನ್ ಬಾರ್ಡರ್ ಕ್ರಾಸ್ ಆಗೋವರೆಗೂ ಏನಾದರೂ ಪರ್ಯಾಯ ವ್ಯವಸ್ಥೆ ಕಲ್ಪಸಬೇಕು. ಸದ್ಯ ನಮಗೆ ನೀರು, ಆಹಾರ ಸರಬರಾಜು ಆಗುತ್ತಿಲ್ಲ. ದಯವಿಟ್ಟು ನಮ್ಮನ್ನು ಕಾಪಾಡವಂತೆ ವಿದ್ಯಾರ್ಥಿನಿ ತನ್ನ ತಂದೆಗೆ ಕಳಿಸಿರೋ ವೀಡಿಯೋ ಸಂದೇಶದಲ್ಲಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

ರಜೀಯಾ ತಂದೆ ಯಾಸಿನ ಬಾಗಿ ಅವರು ಭಾರತೀಯ ಸೇನೆಯಲ್ಲಿ ಸಿಆರ್ ಪಿಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೇ ನೀಡಿದ ಯಾಸಿನ್, ಎರಡು ದಿನಗಳಿಂದ ಮಗಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಗಳು ಎರಡು ದಿನಗಳ ಕಾಲ ಸಂಪರ್ಕಕ್ಕೆ ಸಿಕ್ಕಿದ್ದಳು. ಬಳಿಕ ಸಂಪರ್ಕಕ್ಕೆ ಸಾಧ್ಯವಾಗಿಲ್ಲ. ರಜಿಯಾ ಇರೋ ಜಾಗದ ಬಳಿ ಬಾಂಬ್ ದಾಳಿಗಳು ನಡೆಯುತ್ತಿವೆ.

ಫೈರಿಂಗ್ ಆಗುತ್ತಿದ್ದೆ ಸೈನಿಕರು ಓಡಾಡುತ್ತಿದ್ದರು ಎಂದು ಮಗಳು ತಿಳಿಸಿದ್ದಾಳೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ನೆರವಿಗೆ ಧಾವಿಸಬೇಕು. ವಿದ್ಯಾಭ್ಯಾಸಕ್ಕಾಗಿ ಹೋಗಿರೋ ಮಕ್ಕಳ ರಕ್ಷಣೆ ಮಾಡಬೇಕು ಎಂದು ಯಾಸಿನ ಬಾಗಿ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *