ಧರ್ಮಸ್ಥಳಕ್ಕೆ ಹೋಗುವಾಗ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ನಾನು ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋದಾಗ ಮೀನು ತಿಂದಿದ್ದು ನಿಜ, ಕೋಳಿ ತಿಂದಿದ್ದೂ ನಿಜ. ಮಾಂಸ ತಿಂದು ಹೋದ್ರೆ ದೇವರು ಅಪವಿತ್ರ ಆಗ್ಬಿಡ್ತಾನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಅವತ್ತು ಮಂಗಳೂರಿನಲ್ಲಿ ಮೀನು ತಿಂದಿರೋದು ನಿಜ, ಕೋಳಿ ತಿಂದಿರೋದು ನಿಜ. ಅಂದೇ ಧರ್ಮಸ್ಥಳಕ್ಕೆ ಕಾರ್ಯಕ್ರಮ ನಿಮಿತ್ತ ಹೋಗಿದ್ದೆ. ವೀರೇಂದ್ರ ಹೆಗ್ಗಡೆಯವರು ದರ್ಶನ ಮುಗಿಸಿಕೊಂಡು ಹೋಗಿ ಎಂದು ಹೇಳಿದ್ರು. ವೀರೇಂದ್ರ ಹೆಗ್ಗಡೆಯವರ ಒತ್ತಾಯಕ್ಕೆ ಮಣಿದು ದೇವಸ್ಥಾನಕ್ಕೆ ತೆರಳಿದ್ದೆ. ಆದ್ರೆ ನಾನು ಗರ್ಭಗುಡಿಯನ್ನು ಪ್ರವೇಶ ಮಾಡಿಲ್ಲ. ಹೊರಗಡೆಯೇ ನಿಂತು ನಮಸ್ಕಾರ ಮಾಡಿಕೊಂಡು ಬಂದೆ ಎಂದು ಹೇಳಿದರು.

ಒಂದು ವೇಳೆ ನಾನು ದೇವಸ್ಥಾನದ ಒಳಗಡೆ ಹೋಗಿ ನಮಸ್ಕಾರ ಮಾಡಿದ್ದೇ ಆದ್ರೆ ದೇವರಿಗೆ ಅಪವಿತ್ರ ಆಗಿಬಿಡುತ್ತಾ ಎಂದು ಪ್ರಶ್ನೆ ಮಾಡಿದ್ರು. ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದ್ದ ನೂತನ ಬೀರೇಶ್ವರ ದೇಗುಲದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ರು. ಈ ವೇಳೆ ಜನರನ್ನ ಉದ್ದೇಶಿಸಿ ಮಾತನಾಡುತ್ತಾ ಮೀನು ಹಾಗೂ ಕೋಳಿಯೂಟದ ವಿಚಾರವನ್ನು ಸಿಎಂ ಹೇಳಿದರು.

ಇದನ್ನೂ ಓದಿ: ಪಂಚೆ ಹರೀತು, ಬೆಂಗಾವಲು ವಾಹನ ಆಕ್ಸಿಡೆಂಟಾಯ್ತು, ಹೆಲಿಕಾಪ್ಟರ್ ಹಾರಾಟಕ್ಕೆ ಕುತ್ತು ಬಂತು – ಇವತ್ತು ಸಿಎಂ ಟೈಂ ಚೆನ್ನಾಗಿರ್ಲಿಲ್ಲ..!

 

 

 

 

Comments

Leave a Reply

Your email address will not be published. Required fields are marked *