ಬೆಂಗ್ಳೂರಲ್ಲಿ ಮನೆ ಖರೀದಿಸುವ NRIಗಳೇ ಹುಷಾರ್!

– NRIಗಳೇ ಈತನ ಟಾರ್ಗೆಟ್!

ಬೆಂಗಳೂರು: ನಗರದಲ್ಲಿ ಸುಂದರವಾದ ಫ್ಲಾಟ್ ಅಥವಾ ಮನೆಯನ್ನು ಖರೀದಿಸಿ ನೆಮ್ಮದಿಯಿಂದ ನಿವೃತ್ತಿ ಜೀವನ ಕಳೆಯಬೇಕೆಂದು ಆಸೆಯನ್ನು ಹೊಂದಿರುವ ಎನ್‍ಆರ್‍ಐ ಗಳು ಈ ಸ್ಟೋರಿಯನ್ನು ಒಮ್ಮೆ ಒದಲೇಬೇಕು. ಕಾರಣ ಪ್ಲಾಟ್ ಕೊಡಿಸೋದಾಗಿ ಹೇಳಿ ಎನ್‍ಆರ್‍ಐ ಒಬ್ಬರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಖತರ್ನಾಕ ಆಸಾಮಿಯೊಬ್ಬ ನಗರದಲ್ಲಿದ್ದಾನೆ.

ಗಣೇಶ್ ಎಂಬಾತನೇ ಮನೆ ಕೊಡಿಸುತ್ತೇನೆ ಅಂತಾ ಜನರಿಗೆ ಕೋಟಿ ಕೋಟಿ ವಂಚನೆ ಮಾಡಿದ ಆರೋಪಿ. ದುಬೈನಲ್ಲಿ ಕೆಲಸ ಮಾಡಿಕೊಂಡಿರುವ ರಾಜೇಶ್ ರಾಮಚಂದ್ರನ್ ಅನ್ನೋರು ಇತ್ತೀಚಿಗೆ ನಿವೃತ್ತಿಯಾಗಿದ್ದು, ಬೆಂಗಳೂರಿನಲ್ಲಿ ಮನೆಯೊಂದನ್ನು ಹುಡುಕಾಟ ನಡೆಸಿದ್ರು. ಇದೇ ವೇಳೆ ಪರಿಚಯವಾದ ಗಣೇಶ್, ನಮ್ಮದು ಲಾಂಡ್ ಸನ್ ಇನ್ ಅನ್ನೋ ರಿಯಲ್ ಎಸ್ಟೇಟ್ ಕಂಪೆನಿ ಇದೆ. ನೀವು ಅಲ್ಲಿ ಹಣ ಹೂಡಿಕೆ ಮಾಡಿ ಅಂತಾ ಪುಸಲಾಯಿಸಿ 2013 ರಿಂದ ಹಂತ ಹಂತವಾಗಿ ಸುಮಾರು 12 ಕೋಟಿ ರೂ. ತೆಗೆದುಕೊಂಡು ಮೋಸ ಮಾಡಿದ್ದಾನೆ.

ಈ ಹಿಂದೆ ಬಳ್ಳಾರಿಯ ಹೊಸಪೇಟೆಯಲ್ಲಿ ಸುರೇಶ್ ಬಾಬು ಎಂಬ ನಿವೃತ್ತ ಅಧಿಕಾರಿಯೊಬ್ಬರಿಗೂ ಕೂಡ ಇದೇ ರೀತಿ ಹೇಳಿ 8 ಕೋಟಿ ಹಣ ಪಡೆದು ವಂಚಿಸಿದ್ದಾನೆ. ಇದನ್ನು ತಿಳಿದ ಸುರೇಶ್ ಬಾಬು ಪೊಲೀಸರಿಗೆ ದೂರು ನೀಡಿದ್ರೆ, ಮೊದಲೇ ಅಂಟಿಸಿಪೇಟರಿ ಬೇಲ್ ತೆಗೆದುಕೊಂಡ ಹೊರಗಡೆ ತಿರುಗಾಡುತ್ತಿದ್ದಾನೆ. ಇದೇ ರೀತಿ ಸಾಕಷ್ಟ ನಿವೃತ್ತ ಅಧಿಕಾರಿಗಳಿಗೆ ವಂಚಿಸಿರುವ ಗಣೇಶ್ ಕೇಸ್ ಸಿಸಿಬಿಗೆ ವರ್ಗಾವಣೆಯಾಗಿದೆ.

ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ರಾಥೋಡ್ ಗಣೇಶ್‍ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ವಂಚಿಸಿರುವ ಹಣದಲ್ಲಿ 30 ಕೋಟಿ ಬೆಲೆಬಾಳುವ ಆಸ್ತಿ ಖರೀದಿ ಮಾಡಿರೋದಾಗಿ ತಿಳಿದುಬಂದಿದೆ. ತಡವಾಗಿ ಪ್ರಕರಣ ಬೆಳಕಿಗೆ ಬಂದಿದ್ದು, ಇನ್ನೆಷ್ಟು ಜನಕ್ಕೆ ಇದೇ ರೀತಿ ಮೋಸ ಮಾಡಿದ್ದಾನೆ ಅನ್ನೋದು ತಿಳಿಯಬೇಕಿದೆ.

Comments

Leave a Reply

Your email address will not be published. Required fields are marked *