ಇಂಡೋ ಪಾಕ್ ಕದನದಲ್ಲಿ ಭಾರತೀಯರ ಮನಗೆದ್ದ ಪಾಕ್ ಬೆಡಗಿ

ದುಬೈ: ಏಷ್ಯಾಕಪ್ ಇಂಡೋ ಪಾಕ್ ಕದನದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಪಡೆದ್ದರಿಂದ ಅಭಿಮಾನಿಗಳು ಸಂಭ್ರಮಿಸಿದ್ದರು. ಇದೇ ಪಂದ್ಯದಲ್ಲಿ ಪಾಕ್ ಬೆಂಬಲಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಪಾಕ್ ಬೆಡಗಿಗೆ ಭಾರತೀಯ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪಂದ್ಯದ ನಡುವೆ ಪಾಕ್ ಸೋಲು ಖಚಿತವಾಗುತ್ತಿದಂತೆ ಕ್ಯಾಮೆರಾಮನ್ ಪ್ರೇಕ್ಷಕರ ಸಂಭ್ರಮಾಚರಣೆ ಸೆರೆಹಿಡಿಯಲು ಮುಂದಾಗಿದ್ದು, ಈ ವೇಳೆ ಯುವತಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾಳೆ. ಇದನ್ನು ಕಂಡ ಹಲವು ಅಭಿಮಾನಿಗಳು ಮತ್ತೆ ಯುವತಿಯನ್ನು ಕಾಣಲು ಇಂಡೋ ಪಾಕ್ ನಡುವೆ ಮತ್ತಷ್ಟು ಪಂದ್ಯಗಳನ್ನು ಆಯೋಜಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಮತ್ತು ಕೆಲವರು ಇಂಡೋ ಪಾಕ್ ನಡುವಿನ ಪಂದ್ಯಗಳು ಕ್ರಿಕೆಟನ್ನು ಜೀವಂತವಾಗಿಡುತ್ತದೆ ಎಂದು ಯುವತಿ ಫೋಟೋ ಶೇರ್ ಮಾಡಿದ್ದಾರೆ.

https://twitter.com/ekchbhau/status/1042465732301283328?

ಪಾಕ್ ಯುವತಿಯ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಅಭಿಮಾನಿಗಳು ಭರ್ಜರಿ ಕಾಮೆಂಟ್ ಮಾಡುವ ಮೂಲಕ ಆಕೆಯ ಸೌಂದರ್ಯವನ್ನು ಮೆಚ್ಚಿದ್ದಾರೆ. ಅಲ್ಲದೇ ಪಂದ್ಯದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದು ಎಂದು ಹಣೆಬರಹವನ್ನು ನೀಡಿ ಫೋಟೋ ಶೇರ್ ಮಾಡಿದ್ದಾರೆ. ಪಾಕ್ ಪಂದ್ಯದಲ್ಲಿ ಸೋಲುವುದು ಖಚಿತವಾಗಿದ್ದರೂ ತಂಡದ ಜರ್ಸಿ ತೊಟ್ಟಿದ್ದ ಯುವತಿ ಮಾತ್ರ ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಳು. ಕೆಲವೇ ಸೆಕೆಂಡ್‍ಗಳು ಮಾತ್ರ ಯುವತಿ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/aviikhattak/status/1042459345513066497?

https://twitter.com/BabaJunglee/status/1042456853953695744?

Comments

Leave a Reply

Your email address will not be published. Required fields are marked *