ಉಡುಪಿಯಲ್ಲಿ ಸಂಜೆ 7ರ ನಂತರ ಬೀಚ್‍ಗೆ ನಿರ್ಬಂಧ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಮಹಾಸ್ಫೋಟ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐವರು ಶಾಸಕರ ಸಭೆ ನಡೆದಿದೆ. ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನೇತೃತ್ವ ವಹಿಸಿದ್ದು, ಕೋವಿಡ್ ತಡೆಯುವ ಮತ್ತು ಸೋಂಕಿತರಿಗೆ ಚಿಕಿತ್ಸೆ ಕೊಡುವ ಬಗ್ಗೆ ಚರ್ಚೆ ನಡೆಸಲಾಯಿತ್ತು.

ಜನಪ್ರತಿನಿಧಿ, ಅಧಿಕಾರಿಗಳು, ವೈದ್ಯರ ಸಭೆ ನಂತರ ಮಾತನಾಡಿದ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಯಲ್ಲಿ 979 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 61 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲಾ ಸೋಂಕಿತರ ಮನೆಯನ್ನು ಸೀಲ್ ಮಾಡಿದ್ದೇವೆ. ಪ್ರತಿದಿನ 8 ಸಾವಿರ ಜನರ ಕೊರೊನ ಟೆಸ್ಟ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 54 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡುವ ಗುರಿಯಿದೆ. ಇದನ್ನೂ ಓದಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ, ಮಾ.10ರಂದು ಮತ ಎಣಿಕೆ

ಸಂಜೆ ಬೀಚ್‍ಗೆ ಪ್ರವಾಸಿಗರನ್ನು ತಡೆಯುವ ಹಿನ್ನೆಲೆಯಲ್ಲಿ ಸಂಜೆ 7 ಗಂಟೆ ನಂತರ ಬೀಚ್ ಪ್ರವೇಶ ನಿಷೇಧ ಮಾಡುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು. ಸಂಜೆ 6:30 ನಂತರ ಬೀಚಿನಲ್ಲಿ ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡುತ್ತೇವೆ. 7 ಗಂಟೆ ನಂತರ ಬೀಚಿನಲ್ಲಿ ವಿಹರಿಸೋದದಕ್ಕೆ ನಿರ್ಬಂಧ ಹಾಕಲಾಗುವುದು ಎಂದರು. ಇದನ್ನೂ ಓದಿ: ಪಂಜಾಬ್‌ ಚುನಾವಣೆ – ನಟ ಸೋನು ಸೂದ್‌ ಸಹೋದರಿ ಕಾಂಗ್ರೆಸ್‌ ಸೇರ್ಪಡೆ

Comments

Leave a Reply

Your email address will not be published. Required fields are marked *