ಬೀಚ್​ನಲ್ಲಿ ತೇಲಿ ಹೋದ  ಐವರು -ಇಬ್ಬರ ಶವ ಪತ್ತೆ

ವಿಶಾಖಪಟ್ಟಣ: ಬೀಚ್​ನಲ್ಲಿ ಸ್ನಾನಕ್ಕೆಂದು ಇಳಿದಿದ್ದ ವೇಳೆ ಓರ್ವ ಯುವತಿ ಸೇರಿದಂತೆ ಐವರು ನೀರು ಪಾಲಾದ ದುರ್ಘಟನೆ ಇಂದು ನಡೆದಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಪ್ರಸಿದ್ಧ ರಾಮಕೃಷ್ಣ(ಆರ್​ಕೆ) ಬೀಚ್​ನಲ್ಲಿ ಸ್ನಾನಕ್ಕೆಂದು ಇಳಿದಿದ್ದ ವೇಳೆ ಈ ಘಟನೆ ನಡೆದಿದೆ.  ಮೃತದೇಹ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಈಜಾಡುವ ವೇಳೆ ನೀರಿನ ರಭಸಕ್ಕೆ ಐವರು ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌ ಇದನ್ನೂ ಓದಿ: ಯುಪಿಯಲ್ಲಿ ಯೋಗಿ ಸರ್ಕಾರ ಅಪರಾಧಿಗಳೊಂದಿಗೆ ʼಜೈಲು-ಜೈಲುʼ ಆಟವಾಡ್ತಿದೆ: ಮೋದಿ

ಶೋಧ ಕಾರ್ಯಾಚರಣೆ ನಡೆಸಿದಾಗ ಇಬ್ಬರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನೀರುಪಾಲಾದ ಐದು ಜನ ಒಡಿಶಾ ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಭೀತಿ – ಪಶ್ಚಿಮ ಬಂಗಾಳದಲ್ಲಿ ನಾಳೆಯಿಂದ ಶಾಲಾ, ಕಾಲೇಜ್ ಬಂದ್

Comments

Leave a Reply

Your email address will not be published. Required fields are marked *