ಇಸ್ರೋ ಶ್ರಮಕ್ಕೆ ಅಭಿನಂದನೆ

ಬೆಂಗಳೂರು: ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ. ಹಾಗಾಗಿ ಇಸ್ರೋ ವಿಜ್ಞಾನಿಗಳು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಇಸ್ರೋ ಸಾಧನೆಗೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಚಂದ್ರಯಾನದ ಅಂತಿಮ ಕ್ಷಣ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸಹ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ. ಉಳಿದಂತೆ ಎಲ್ಲ ರಾಜಕೀಯ ನಾಯಕರು, ಗಣ್ಯರು ಸಹ ಇಸ್ರೋ ವಿಜ್ಞಾನಿಗಳ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

ನರೇಂದ್ರ ಮೋದಿ: ದೇಶದ ಮಹತ್ವಾಕಾಂಕ್ಷಿ ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡು ಇಡೀ ಇಸ್ರೋ ವಿಜ್ಞಾನಿಗಳ ತಂಡ ನಿರಾಶೆಯಲ್ಲಿದ್ದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಧೈರ್ಯ ತುಂಬಿದರು. ಇಸ್ರೋ ಅಧ್ಯಕ್ಷ ಕೆ. ಶಿವನ್ ಪ್ರಧಾನಿ ಮೋದಿ ಬಳಿ ಬಂದು ಕೆಲವು ಮಾಹಿತಿ ನೀಡಿದರು. ನಂತರ ಮೋದಿ ಎದ್ದು ನಿಂತು ತಲೆ ಕೆಡಿಸಿಕೊಳ್ಳಬೇಡಿ ಎಂದು ಧೈರ್ಯ ತುಂಬಿ ಕೆ.ಶಿವನ್ ಅವರ ಬೆನ್ನು ತಟ್ಟಿದರು. ನಮ್ಮ ಸಾಧನೆ ಕಡಿಮೆಯದ್ದೇನಲ್ಲ, ಧೈರ್ಯವಾಗಿರಿ. ಜೀವನದಲ್ಲಿ ಏರಿಳಿತ ಸಾಮಾನ್ಯ. ಎಲ್ಲರ ಮುಖದಲ್ಲಿ ಆತಂಕ ಕಾಣಿಸುತ್ತಿತ್ತು. ದೇಶ ನಿಮ್ಮ ಬಗ್ಗೆ ಹೆಮ್ಮೆಯಿಂದ ನೋಡುತ್ತದೆ. ಇದರಿಂದ ಸಾಕಷ್ಟು ಕಲಿತಿದ್ದೇವೆ. ನಿಮ್ಮ ಜತೆ ಸದಾ ನಾನಿರುತ್ತೇನೆ ಎಂದು ಮೋದಿ ಅಭಯ ನೀಡಿದರು. ದೇಶ ನಿಮ್ಮ ಸಾಧನೆಗೆ ಹೆಮ್ಮೆ ಪಡುತ್ತದೆ. ಅಭಿನಂದನೆಗಳು. ಬಹಳಷ್ಟು ಕಲಿಯುವುದಿದೆ. ನಮ್ಮ ಕೆಲಸಗಳು ಸಾಕಷ್ಟಿವೆ. ಧೈರ್ಯದಿಂದ ಮುನ್ನುಗೋಣ. ಎಲ್ಲರಿಗೂ ಒಳ್ಳೆಯದಾಗಲಿ, ಆಲ್ ದ ಬೆಸ್ಟ್ ಎಂದು ಮೋದಿ ಎಲ್ಲರಿಗೂ ಧೈರ್ಯ ತುಂಬಿದರು. ಇದನ್ನು ಟ್ವಿಟರ್ ನಲ್ಲೂ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ: ಇಸ್ರೋ ವಿಜ್ಞಾನಿಗಳಿಗೆ ಸಂಸದ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಪರಿಶ್ರಮ ವ್ಯರ್ಥವಾಗಲ್ಲ. ಬಾಹ್ಯಾಕಾಶದಲ್ಲಿ ಸಾಧನೆ ಮಾಡಲು ಇದೊಂದು ಮೈಲಿಗಲ್ಲು ಎಂದು ಶುಭಕೋರಿದ್ದಾರೆ.

ಅಮಿತ್ ಶಾ: ಇಸ್ರೋ ವಿಜ್ಞಾನಿಗಳಿಗೆ ಗೃಹ ಸಚಿವ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಇಡೀ ದೇಶವೇ ಹೆಮ್ಮ ಪಡುವಂತಹ ಕೆಲಸ ಮಾಡಿದ್ದೀರ ಎಂದು ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ.

ನಿರ್ಮಲಾ ಸೀತಾರಾಮನ್: ಇಸ್ರೋದ ಸಾಧನೆಗೆ ಬಗ್ಗೆ ಕೇಂದ್ರ ಸಚಿವೆ ಸಚಿವ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ. ಸಾವು ನಿಮ್ಮೊಂದಿಗೆ ಇದ್ದೇವೆ.. ಎಲ್ಲಾ ವಯೋಮಾನದವನ್ನು ಒಟ್ಟಿಗೆ ಸೇರಿಸಿ ನಬೋ ಮಂಡಲದ ಸಾಧನೆ ಮಾಡಿದ್ದೀರಿ. ಸದ್ಯ ಸಂಪರ್ಕ ಕಡಿತಗೊಂಡರೂ ಮುಂದೆ ನೀವು ಯಶಸ್ವಿ ಆಗುತ್ತಿರ ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *