ಹಾಲು ಕುಡಿಯೋ ಮುನ್ನ ಎಚ್ಚರ- ನೀವು ಕುಡಿತಿರೋದು ಹಾಲಲ್ಲ ಹಾಲಾಹಲ!

– ಹಾಲಲ್ಲಿ ಯೂರಿಯಾ, ಡಿಟರ್ಜೆಂಟ್, ಸರ್ಫ್‍ಪೌಡರ್ ಬಳಕೆ!

ಬೆಂಗಳೂರು: ಹಾಲು ಅಮೃತ ಅಂತಾರೆ, ಆದರೆ ಈಗ ಹಾಲು ವಿಷ ಅನ್ನುವ ಅತಂಕಕಾರಿ ವಿಚಾರ ಆಹಾರ ಮತ್ತು ಸುರಕ್ಷತಾ ಇಲಾಖೆ ಹೊರಹಾಕಿದೆ.

ಆರೋಗ್ಯಕ್ಕೆ ಒಳ್ಳೆದು ಅಂತಾ ಕುಡಿಯೋ ಹಾಲಲ್ಲಿ ಫ್ಯಾಟ್ ಅಂಶ ಹಾಗೂ ಹಾಲು ಕೆಡದಂತೆ ಯೂರಿಯಾ ಹಾಗೂ ಡಿಟರ್ಜೆಂಟ್ ಬಳಕೆ ಮಾಡಲಾಗುತ್ತಿದೆ ಅನ್ನುವ ಶಾಕಿಂಗ್ ಸುದ್ದಿಯನ್ನು ಇಲಾಖೆ ಹೊರಹಾಕಿದೆ.

ಕರ್ನಾಟಕದಲ್ಲಿ ಕಲಬೆರೆಕೆ ಹಾಲು ವಿತರಣೆಯಾಗುವ ಬಗ್ಗೆ ಇಲಾಖೆಗೂ ದೂರು ಬಂದಿತ್ತು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರ ಇಲಾಖೆಗೆ ಹಾಲಿನ ಪರೀಕ್ಷೆ ನಡೆಸಿ ಅನ್ನುವ ಸೂಚನೆಯನ್ನು ರವಾನಿಸಿದೆ. ಜೊತೆಗೆ ಹೈದರಾಬಾದ್ ಎನ್‍ಜಿಓಗೆ ಕರ್ನಾಟಕದ ಹಾಲಿನ ಕಲಬೆರೆಕೆ ಪತ್ತೆಯ ಜವಾಬ್ದಾರಿಯನ್ನು ಕೂಡ ವಹಿಸಿದೆ.

ಬೆಂಗಳೂರು, ಮಂಗಳೂರು, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹಾಲಿನ ಅಸಲಿಯತ್ತು ಪರೀಕ್ಷೆ ನಡೆಯಲಿದೆ. ಕೆಎಂಎಫ್ ಸೇರಿದಂತೆ ದೊಡ್ಲಾ, ಅಮೋಘ, ತಿರುಮಲ ಒಟ್ಟು ಹದಿನಾರು ವಿವಿಧ ಬ್ರ್ಯಾಂಡ್ ಹಾಲುಗಳ ಪರೀಕ್ಷೆ ಈ ವಾರದಲ್ಲಿ ನಡೆಯಲಿದೆ ಅಂತಾ ಇಲಾಖೆ ಆಯುಕ್ತರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಈಗ ತುಂಬಾ ಕಲಬೆರಕೆ ಮಾಡುತ್ತಿದ್ದಾರೆ. ನಮಗೆ ಕಲಬೆರಕೆ ಹಾಲು ನೀಡುತ್ತಿದ್ದಾರೆ ಎಂದು ಸಾಕಷ್ಟು ಜನ ದೂರು ನೀಡುತ್ತಿದ್ದಾರೆ. ಕಲಬೆರಕೆಯಲ್ಲಿ ಎರಡು ರೀತಿಯ ಹಾಲುಗಳಿರುತ್ತದೆ. ಅದರಲ್ಲಿ ಮೊದಲನೇಯದು ಆರ್ ಗೈನಸರ್ ಸೆಕ್ಟರ್ ಎಂದರೆ ಟ್ಯಾಂಕರ್ಸ್‍ನಿಂದ ಹಾಲುಗಳು ಬರುತ್ತದೆ. ಅದನ್ನು ಪರೀಕ್ಷಿಸಿ ಎಂದು ಹೇಳುತ್ತಾರೆ. ಹೀಗೆ ಕಳೆದ ಎರಡು ವರ್ಷದಿಂದ ದೂರು ಬರುತ್ತಿದ್ದು, ನಾವು ಹಾಲಿನ ಸರ್ವೆ ಕೂಡ ಮಾಡಿಸಿದ್ದೀವಿ. ನಂತರ 6-10 ಲೀಗಲ್ ಸ್ಯಾಂಪಲ್ ಕೂಡ ತಗೆದುಕೊಂಡು ಪರೀಕ್ಷಿಸಿದಾಗ ಬೆಳಗಾವಿಯಲ್ಲಿ ಹಾಲಿಗೆ ಕಲಬೆರಕೆ ಮಾಡುತ್ತಿರುವುದು ತಿಳಿದು ಬಂದಿದೆ. ಹಾಗಾಗಿ ಅವರು ಮೇಲೆ ಕಾನೂನು ರೀತಿ ಮೊಕದ್ದಮ್ಮೆ ಹೂಡಿದ್ದೀವಿ ಎಂದು ಇಲಾಖೆ ಆಯುಕ್ತರಾದ ಹರ್ಷವರ್ಧನ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *