ಪರ್ಸ್ ನಲ್ಲಿ ಹಣ, ಮೊಬೈಲ್ ತಗೊಂಡು ಹೊರಗಡೆ ಹೋಗೋವಾಗ ಹುಷಾರ್!

ಬೆಂಗಳೂರು: ಮನೆ ಕೆಲಸಕ್ಕೆ ಬಂದಿದ್ದೇವು ಎಂದು ಹೇಳಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳಿಯರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.

ದಿಲ್ ಶಾದ್ ಮತ್ತು ಪ್ಯಾರೇಜಾನ್ ಬಂಧಿತ ಆರೋಪಿಗಳು. ಸೋಮವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಮುಂದಾದಾಗ ಇಬ್ಬರು ಕಳ್ಳಿಯರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಈ ಹಿಂದೆ ಡಿಜೆ ಹಳ್ಳಿ ಪೊಲೀಸರಿಂದ ಬಂಧನಕ್ಕೊಳಗಾಗಿ ಮೂರು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದರು. ಜೈಲಿನಿಂದ ಬಂದ ಬಳಿಕ ಮತ್ತೆ ತಮ್ಮ ಕೈಚಳಕ ಮುಂದುವರಿಸಿದ್ದರು. ಏರಿಯಾದಲ್ಲಿ ಅಕ್ಕ-ತಂಗಿ ಎಂದು ಹೇಳಿಕೊಂಡು ಮನೆ ಕೆಲಸ ಮಾಡುತ್ತೀವಿ ಎಂದು ಕಳ್ಳತನ ಮಾಡುತ್ತಾರೆ.

ಅಲ್ಲದೇ ಇವರಿಬ್ಬರು ಮದುವೆ ಕಾರ್ಯಕ್ರಮಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಪರ್ಸ್ ಎಗರಿಸೋಕೆ ನಿಂತಿರುತ್ತಾರೆ. ಜನರ ಗಮನವನ್ನು ಬೇರೆಡೆ ಸೆಳೆದು, ಸ್ವಲ್ಪ ಯಾಮಾರುವಷ್ಟರಲ್ಲಿ ಪರ್ಸ್, ಮೊಬೈಲ್ ಕಳ್ಳತನ ಮಾಡುತ್ತಾರೆ.

Comments

Leave a Reply

Your email address will not be published. Required fields are marked *