ಕಾಮುಕರ ಅಡ್ಡೆಯಾದ ಕಬ್ಬನ್ ಪಾರ್ಕ್ – ಹುಡ್ಗಿಯರೇ ಜೋಪಾನ

ಬೆಂಗಳೂರು: ವಿಧಾನಸೌಧ ಪಕ್ಕ ಇರುವ ಕಬ್ಬನ್ ಪಾರ್ಕ್ ಈಗ ಪೋಲಿ ಕಾಮುಕರಿಂದಾಗಿ ಡರ್ಟಿ ಪಾರ್ಕ್ ಆಗಿ ಬದಲಾಗಿದ್ದು, ಹುಡುಗಿಯರು ಕಬ್ಬನ್ ಪಾರ್ಕ್ ಗೆ ಹೋಗೋ ಮುನ್ನ ಜೋಪಾನವಾಗಿರಿ.

ಕಬ್ಬನ್ ಪಾರ್ಕಿನಲ್ಲಿ ಕಾಮುಕರ ಕಾಟ ಹೆಚ್ಚಾಗಿದ್ದು, ಪಾರ್ಕ್ ಗೆ ಹೋಗುವ ಹುಡುಗಿಯರನ್ನು ಕಾಮುಕರು ಟಾರ್ಗೆಟ್ ಮಾಡುತ್ತಿದ್ದಾರೆ. ಪಾರ್ಕ್ ನಲ್ಲೇ ಕಾಮುಕರು ಡ್ರಗ್ಸ್ ಮತ್ತು ಗಾಂಜಾ ಸೇವಿಸುತ್ತಿದ್ದು, ಅದರ ಮತ್ತಿನಲ್ಲಿ ಕಬ್ಬನ್ ಪಾರ್ಕ್ ಗೆ ಬರುವ ಹುಡುಗಿಯರು ಇವರ ಕಣ್ಣಿಗೆ ಬಿದ್ದರೆ, ಅವರನ್ನು ವಿಷಲ್ ಹೊಡೆದು ಕರಿಯುತ್ತಿದ್ದಾರೆ. ಒಂದು ವೇಳೆ ಯಾಕೋ ವಿಷಲ್ ಹೊಡಿತಿಯಾ ಅಂತ ಹುಡುಗಿಯರು ತಿರುಗಿ ಬಿದ್ದರೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬೆದರಿಕೆಯನ್ನು ಒಡ್ಡುತ್ತಿದ್ದಾರೆ.

ಗುಂಪು ಗುಂಪನಲ್ಲಿ ಬಂದು ಡ್ರಗ್ಸ್ ತಗೊಂಡು ಮತ್ತಲ್ಲಿರುವ ಪೋಲಿ ಹೈಕ್ಳು ಕಬ್ಬನ್ ಪಾರ್ಕ್ ನ ಮೂಲೆ ಮೂಲೆಯಲ್ಲೂ ಇದ್ದಾರೆ. ಈ ದೃಶ್ಯವಾಳಿಗಳು ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಈ ಪಾರ್ಕ್ ನಲ್ಲಿ ಅತ್ಯಾಚಾರ ಪ್ರಕರಣ ನಡೆದಾಗ ಹೆಚ್ಚುವರಿ ಭದ್ರತಾ ಸಿಬ್ಬಂದಿ, ಸಿಸಿಟಿವಿ ಹಾಕುತ್ತೀವಿ ಅಂತ ತೋಟಗಾರಿಕ ಇಲಾಖೆ ಹೇಳಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಸೌಲಭ್ಯಗಳನ್ನು ನಿಯೋಜನೆ ಮಾಡಿಲ್ಲ.

ಹುಡುಗಿಯರು ಅಲ್ಲಿನ ಸೆಕ್ಯೂರಿಟಿ ಅವರಿಗೆ ಹೇಳಿದರೆ ಅವರು ಕಾಮುಕರ ವಿರುದ್ಧ ಕ್ರಮಕೈಗೊಳ್ಳದೆ ಸುಮ್ಮನೆ ಕುಳಿತಿರುತ್ತಾರೆ. ಈ ಪಾರ್ಕ್ ಗೆ ಮಕ್ಕಳು, ಮಹಿಳೆಯರು ಬರಲು ಸಾಧ್ಯವಾಗುತ್ತಿಲ್ಲ. ವಿಧಾನಸೌಧದ ಪಕ್ಕದಲ್ಲಿರುವ ಪಾರ್ಕ್ ನಲ್ಲಿ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *