ಟ್ರಾಫಿಕ್ ಇಲಾಖೆ ಹೆಸರಲ್ಲಿ ಇಮೇಲ್ ಬಂದ್ರೆ ಓಪನ್ ಮಾಡ್ಬೇಡಿ- ಬೀ ಅಲರ್ಟ್!

ಬೆಂಗಳೂರು: ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ದಂಡ ಕಟ್ಟಿ ಅಂತಾ ನಿಮ್ಮ ಮೇಲ್‍ಗಳಿಗೆ ಲಿಂಕ್ ಇರುವ ಮೆಸೇಜ್ ಬಂದರೆ ಅಲರ್ಟ್ ಆಗಿರಿ. ದಂಡ ಕಟ್ಟಬೇಕಾ, ಅದ್ಯಾವ ರೂಲ್ಸ್ ಬ್ರೇಕ್ ಮಾಡಿದೆ ಅಂತಾ ಕುತೂಹಲದಿಂದ ಈ ಲಿಂಕ್‍ನ್ನು ಒಪನ್ ಮಾಡಬೇಡಿ. ನಿಮ್ಮ ವೈಯಕ್ತಿಕ ಡೇಟಾ, ಸ್ವಲ್ಪ ಯಾಮಾರಿದರೆ ಅಕೌಂಟ್ ಡಿಟೈಲ್ಸ್ ಸೈಬರ್ ಕಳ್ಳರ ಕೈಗೆ ಹೋಗುತ್ತೆ.

ಬೆಂಗಳೂರಿನ ಯುವಕನೊಬ್ಬನಿಗೆ ಇದೇ ರೀತಿ ಮೇಲ್ ಬಂದಿದೆ. ಯುವಕ ಕೂಡಲೇ ಟ್ರಾಫಿಕ್ ಪೊಲೀಸರಿಗೆ ಈ ಖತರ್‍ನಾಕ್ ಕಳ್ಳರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಇದರಿಂದ ತಲೆಕೆಡಿಸಿಕೊಳ್ಳದ ಟ್ರಾಫಿಕ್ ಇಲಾಖೆ ಈ ಬಗ್ಗೆ ಸೈಬರ್ ಕ್ರೈಂಗೆ ದೂರು ಕೊಡಿ ಅಂತಾ ಉತ್ತರ ಕೊಟ್ಟಿದ್ದಾರೆ.

ಇದರಿಂದ ಅದೆಷ್ಟೋ ಜನರಿಗೆ ತೊಂದರೆಯಾಗುತ್ತೆ ಅಂತಾ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಎಂಬವರು ಸೈಬರ್ ಕ್ರೈಂಗೆ ದೂರು ಕೊಡಲು ಮುಂದಾಗಿದ್ದಾರೆ. ಏಕೆಂದರೆ ಸಹಜವಾಗಿ ಜನ ಟ್ರಾಫಿಕ್ ಇಲಾಖೆಯ ಹೆಸರಲ್ಲಿ ಮೇಲ್ ಮಾಡಿದರೆ ತಕ್ಷಣ ಸ್ಪಂದಿಸುತ್ತಾರೆ.

ಇದರಿಂದ ಸೈಬರ್ ಕಳ್ಳರ ಸುಳಿಯೊಳಗೆ ಸಿಕ್ಕಿ ಹಾಕಿಕೊಂಡಂತಾಗುತ್ತೆ. ಟ್ರಾಫಿಕ್ ಇಲಾಖೆಯೇ ಸೈಬರ್ ಕಳ್ಳರ ಪಾಲಾದರೂ ಇಲಾಖೆಯೇ ಗಂಭೀರವಾಗಿ ಈ ಪ್ರಕರಣವನ್ನು ತೆಗೆದುಕೊಂಡಿಲ್ಲ. ಜನಸಾಮಾನ್ಯರು ಎಚ್ಚರಿಕೆಯಿಂದ ಇರಬೇಕು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *