ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ

ಮುಂಬೈ: ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಆಮೋಘ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅಂಡರ್ 19 ಆಟಗಾರರ ತಂಡ ಪ್ರಶಸ್ತಿ ಗೆದ್ದ ಕೆಲವೇ ಕ್ಷಣಗಳಲ್ಲಿ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.

ವಿಶ್ವಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ನಾಯಕತ್ವದ ತಂಡ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದು ವಿಶ್ವಕಪ್ ಎತ್ತಿದೆ. ಇದನ್ನೂ ಓದಿ: ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದ ಟೀಂ ಇಂಡಿಯಾ

ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಸಿಸಿಐ ತಂಡದ ಎಲ್ಲಾ ಆಟಗಾರರಿಗೆ ತಲಾ 30 ಲಕ್ಷ ರೂ. ಬಹುಮಾನ ಘೋಷಿಸಿದೆ. ಅಲ್ಲದೇ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಡ್ರಾವಿಡ್ ಅವರಿಗೆ 50 ಲಕ್ಷ ರೂ. ಬಹುಮಾನ ನೀಡಿದೆ. ತಂಡದ ಬೆಂಬಲವಾಗಿ ನಿಂತಿದ್ದ ಇತರೇ ಸಿಬ್ಬಂದಿ ಹಾಗೂ ಬೌಲಿಂಗ್ ಕೋಚ್ ಆಭಯ್ ಶರ್ಮಾ ಅವರು ತಲಾ 20 ಲಕ್ಷ ರೂ. ಪಡೆಯಲಿದ್ದಾರೆ.  ಇದನ್ನೂ ಓದಿ: 2003ರ ಸೋಲಿಗೆ ಸೇಡು ತೀರಿಸಿಕೊಂಡ ದ್ರಾವಿಡ್!

ಅಜೇಯ ತಂಡ: ಟೀಂ ಇಂಡಿಯಾ-19 ತಂಡ ಈ ಬಾರಿಯ ವಿಶ್ವಕಪ್‍ನಲ್ಲಿ ಎಲ್ಲ ತಂಡಗಳಿಗೂ ಪೈಪೋಟಿ ನೀಡಿ ಆಜೇಯವಾಗಿ ವಿಶ್ವಕಪ್ ಗೆದ್ದು ಬಿಗಿದೆ. ಟೂರ್ನಿಯ ಲೀಗ್ ಹಂತದಲ್ಲಿ ಯಾವುದೇ ಪಂದ್ಯವನ್ನು ಸೋತಿಲ್ಲ. ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಫಿಲ್ಡೀಂಗ್ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲೂ ಉತ್ತಮ ಪ್ರದರ್ಶನವನ್ನು ನೀಡಿತ್ತು. ತಂಡದ ಪ್ರತಿಯೊಬ್ಬ ಆಟಗಾರರನ ಸ್ಥಿರ ಪ್ರದರ್ಶನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಇದನ್ನೂ ಓದಿ: ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

Comments

Leave a Reply

Your email address will not be published. Required fields are marked *