ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ದೂರು ಕೊಟ್ಟವರಿಗೇ ಅಧಿಕಾರಿಗಳು ಬೋಧನೆ ಮಾಡಿರೋ ಘಟನೆ ನಡೆದಿದೆ. ಹೌದು. ಇದು ಬಿಬಿಎಂಪಿ ಅಧಿಕಾರಿಯ ಎಮೋಷನಲ್ ಬ್ಲಾಕ್‍ಮೇಲ್ ಸ್ಟೋರಿ.
ಭ್ರಷ್ಟರ ವಿರುದ್ಧ ದೂರು ಕೊಟ್ರೆ ಅಧಿಕಾರಿಗಳೇ ಅಯ್ಯೋ ಬಿಟ್ಬಿಡಿ ಎಂದಿದ್ದಾರೆ. ಎಮೋಷನಲ್ ಬ್ಲಾಕ್ ಮೇಲ್ ಮಾಡಿದ ಬಿಬಿಎಂಪಿ ಅಧಿಕಾರಿಯ ಕಿಲಾಡಿತನ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಏನಿದು ಪ್ರಕರಣ?: ದೊಮ್ಮಲೂರು ವಲಯದಲ್ಲಿ ಬಿಬಿಎಂಪಿ ನಕ್ಷೆಗೆ ವ್ಯತಿರಿಕ್ತವಾಗಿ ಶ್ರೀನಿವಾಸ್ ಎಂಬವರಿಂದ ಬೃಹತ್ ಅಪಾರ್ಟ್‍ಮೆಂಟ್ ನಿರ್ಮಾಣವಾಗಿದೆ. ಈ ಬಗ್ಗೆ ಬಿಬಿಎಂಪಿ ಸಹಾಯಕ ಕಮಿಷನರ್ ಮೂರ್ತಿಗೆ ರಾಘವೇಂದ್ರ ಎಂಬವರು ದೂರು ಕೊಟ್ಟಿದ್ರು.
ದೂರು ಕೊಟ್ಟು ಹಲವು ದಿನವಾದ್ರೂ ಕ್ರಮ ಜರುಗಿಸದ ಬಗ್ಗೆ ಸ್ಪಷ್ಟನೆ ಕೇಳಲು ಹೋದ ರಾಘವೇಂದ್ರ ಅವರಿಗೆ, “ಅಯ್ಯೋ ನಾನು ಕ್ರಮ ಕೈಗೊಳ್ಳೋಣ ಅಂತಾನೆ ಹೋದೆ. ಆದ್ರೆ ಅವರು ಸಾಯ್ತೀನಿ ಅಂತ ಹೆದರಿಸಿದ್ರು. ನನಗೆ ಯಾರಾದ್ರೂ ತೊಂದ್ರೆ ಕೊಟ್ಟರೆ ಎಲ್ಲರ ಹೆಸರನ್ನು ಬರೆದಿಟ್ಟು ಸಾಯ್ತೀನಿ ಅಂತ ಹೆದರಿಸಿದ್ರು. ಮನೆಯಲ್ಲಿ ಇಷ್ಟುದ್ದ ಬರೆದಿಟ್ಟಿದ್ದ ಡೆತ್‍ನೋಟ್ ನನಗೆ ಸಿಕ್ಕಿದೆ. ಅದನ್ನ ನೋಡಿ ನಾನು ಸುಮ್ಮನಾದೆ. ಸುಮ್ಮನೆ ಯಾಕ್ ಬೇಕು. ದೂರು ವಾಪಸು ತಗೊಳ್ಳಿ ಅಂತ ಸಹಾಯಕ ಕಮೀಷನರ್ ಮೂರ್ತಿ ಹೇಳಿರುವುದು ಈಗ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
https://www.youtube.com/watch?v=me10nm51x94




Leave a Reply