ಗಣೇಶೋತ್ಸವದಂತೆ ದುರ್ಗಾದೇವಿ ಪ್ರತಿಷ್ಠಾಪನೆಗೂ ಪಾಲಿಕೆ ನಿರ್ಬಂಧ

ಬೆಂಗಳೂರು:  ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಕಡಿಮೆ ಆಗಿದೆ. ಈ ಹಿನ್ನೆಲೆ ಸಾಲು ಸಾಲು ಹಬ್ಬಗಳನ್ನ ಮಾಡಲು ಜನ ಸಜ್ಜಾಗುತ್ತಿದ್ದಾರೆ. ಈಗ ದುರ್ಗಾದೇವಿ ಪ್ರತಿಷ್ಠಾಪಿಸಿ ಪೂಜಿಸಲು ಬೆಂಗಳೂರಿನಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ. ಗಣೇಶೋತ್ಸವದಂತೆ ದುರ್ಗಾದೇವಿ ಪ್ರತಿಷ್ಠಾಪನೆಗೂ ಪಾಲಿಕೆ ನಿರ್ಬಂಧವನ್ನು ಹೇರಿ ಕೆಲವು ಗೈಡ್ ಲೈನ್ಸ್ ಮಾಡಿದೆ.

ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲು ಅವಕಾಶ ಕೊಡಬೇಕು ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಬಿಬಿಎಂಪಿ ದುರ್ಗಾದೇವಿ ಪೂಜಿಸಿ ಪ್ರತಿಷ್ಠಾಪಿಸಲು ಪ್ರತ್ಯೇಕ ಗೈಡ್ ಲೈನ್ ಬಿಡುಗಡೆ ಮಾಡಿದೆ.

bbmp guidelines durga devi

ವಾರ್ಡ್‍ಗೆ ಒಂದೇ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಎತ್ತರ 4 ಅಡಿ ಮೀರದಂತೆ ಕ್ರಮ ವಹಿಸಬೇಕು. ದರ್ಶನದ ವೇಳೆ ಗರಿಷ್ಠ 100 ಮಂದಿಗೆ ಅವಕಾಶ ನೀಡಲಾಗಿದೆ. ವಾರ್ಡಿನಲ್ಲಿ ವಲಯ ಜಂಟಿ ಆಯುಕ್ತರಿಂದ ಅನುಮತಿ ಪಡೆದು ವಾರ್ಡ್‍ಗೆ ಒಂದೇ ಮೂರ್ತಿ ಕೂರಿಸಬೇಕು. ಇದನ್ನೂ ಓದಿ: ರಾತ್ರಿಯಿಂದ ಬೆಂಗಳೂರಲ್ಲಿ ಜಿಟಿಜಿಟಿ ಮಳೆ – ಮಲೆನಾಡು, ಗದಗ, ಕಲಬುರಗಿ, ಕೋಲಾರ, ಚಿತ್ರದುರ್ಗದಲ್ಲೂ ವರ್ಷಧಾರೆ

ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಸ್ಥಳವನ್ನು ಸ್ಯಾನಿಟೈಸ್ ಮಾಡಬೇಕು. ದುರ್ಗಾದೇವಿ ಪ್ರಾರ್ಥನೆ ವೇಳೆ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ದೇವಿ ದರ್ಶನಕ್ಕೆ ಅತಿಥಿಗಳು ಬಂದಾಗ 100 ಕ್ಕಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಡಿಜೆ ಸಂಗೀತ ನಿಷೇಧ, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ವಿಸರ್ಜನೆ ವೇಳೆ 10 ಜನ ಕ್ಕಿಂತ ಮೀರಬಾರದು. ದುರ್ಗಾದೇವಿಯನ್ನು ಕೂರಿಸಲು 5 ದಿನ ಮಾತ್ರ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

Comments

Leave a Reply

Your email address will not be published. Required fields are marked *