ಸಿಎಂ ಬೆಂಗಳೂರು ಜವಾಬ್ದಾರಿ ಮರೆತಿದ್ದಾರೆ: ರಾಮಲಿಂಗಾ ರೆಡ್ಡಿ

ramalinga reddy

ಬೆಂಗಳೂರು: ಸಚಿವರು ಕ್ಷೇತ್ರಕಷ್ಟೆ ಸಚಿವರಾಗಿದ್ದಾರೆ. ಸಿಎಂ ಬೆಂಗಳೂರು ಜವಾಬ್ದಾರಿ ಮರೆತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. ನಾನು 40 ಬಿಬಿಎಂಪಿ ಬಜೆಟ್ ನೋಡಿದ್ದೇನೆ. ಬಜೆಟ್ ವೇಳೆ ಚುನಾಯಿತ ಸದಸ್ಯರು ಇರಬೇಕು. ಬಜೆಟ್‍ಗೂ ಮುನ್ನ ತಯಾರಿ ಮಾಡಿಕೊಂಡಿರುತ್ತಾರೆ. ನಗರದ ಸಂಘ, ಸಂಸ್ಥೆ ಸೇರಿ ಬೇರೆ ಬೇರೆಯವರ ಜೊತೆ ಸಭೆ ವಾರ್ಡ್ ಕಮಿಟಿಗಳ ಜೊತೆ ಸಭೆಯನ್ನು ನಡೆಸುತ್ತಿದ್ದರು. ಎಲ್ಲರ ಅಭಿಪ್ರಾಯ ಪಡೆದು ಬಿಬಿಎಂಪಿ ಬಜೆಟ್ ಮಂಡಿಸುತ್ತಿದ್ದರು. ಆದರೆ ಈ ಬಾರಿ ಯಾರ ಅಭಿಪ್ರಾಯವನ್ನು ಪಡೆದಿಲ್ಲ. ಕೆಲವು ಸಚಿವರು, ಶಾಸಕರ ಅಭಿಪ್ರಾಯವನ್ನಷ್ಟೇ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದರು.

ಬಜೆಟ್ ವೇಳೆ ಸಂಪೂರ್ಣ ನಿಯಮ ಮೀರಿದ್ದಾರೆ. ಕಳೆದ ಬಾರಿ ಕೋವಿಡ್ ಇತ್ತು. ಆಗ ಆನ್‍ಲೈನ್‍ನಲ್ಲಿ ಬಜೆಟ್ ಮಂಡಿಸಿದ್ದರು. ಆದರೆ ಈ ಬಾರಿ ಕೋವಿಡ್ ಕೂಡ ಇಲ್ಲ. ಪಾಲಿಕೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿಲ್ಲ. ಪಾಲಿಕೆ ವ್ಯಾಪ್ತಿಯ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಿಲ್ಲ ಎಂದರು.

ಮಾರ್ಚ್ 10 ರೊಳಗೆ ಪ್ರಕ್ರಿಯೆ ಮುಗಿಸಬೇಕಿತ್ತು. 8500 ಕೋಟಿಗಿಂತ ಹೆಚ್ಚು ಮಂಡಿಸುವಂತಿಲ್ಲ. ಆದರೆ ಇಂದು 10,460 ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಚುನಾಯಿತ ಜನಪ್ರತಿನಿಧಿಗಳೂ ಇಲ್ಲ. 1,500 ಸಾವಿರ ಕೋಟಿ ಹೆಚ್ಚುವರಿ ಬಜೆಟ್ ಮಂಡಿಸಿದ್ದಾರೆ. ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಿದ್ದಾರೆ. ರಾತ್ರೋರಾತ್ರಿ ಅನ್‍ಲೈನ್‍ನಲ್ಲಿ ಬಜೆಟ್ ಅಪ್‌ಲೋಡ್ ಮಾಡಿದ್ದಾರೆ. ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಜೆಟ್ ಮಂಡನೆ ಕಾನೂನು ಬಾಹಿರ. 8,500 ಕೋಟಿ ರೂ.ವರೆಗೆ ಬಜೆಟ್ ಮಂಡಿಸಬಹುದು. ಆದರೆ 1,500 ಕೋಟಿ ಹೆಚ್ಚುವರಿ ಮಂಡಿಸಿದ್ದಾರೆ. ರಾತ್ರೋರಾತ್ರಿ ಬಜೆಟ್ ಹಾಕಿದ್ದು ಸರಿಯಲ್ಲ. ಕೂಡಲೇ ಬಜೆಟ್‍ನನ್ನು ವಾಪಸ್ ತೆಗೆದುಕೊಳ್ಳಬೇಕು. ಎಲ್ಲರ ಅಭಿಪ್ರಾಯ ಪಡೆದು ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನನ್ನ ಮನೆ ಪಕ್ಕದಲ್ಲೇ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗಲಿ: ಸುನೀಲ್ ಕುಮಾರ್

ಸಿಎಂ ಬೆಂಗಳೂರು ಉಸ್ತುವಾರಿ ಆಗಿದ್ದಾರೆ. ಅವರ ಕಣ್ಣೆದುರಲ್ಲೇ ಈ ರೀತಿ ಅನ್ಯಾಯ ಆಗುತ್ತಿದೆ. ಬೆಂಗಳೂರಲ್ಲಿ ಲಕ್ಷಾಂತರ ಗುಂಡಿಗಳಿವೆ. ಎಷ್ಟೋ ಮಂದಿ ಸಾವನ್ನಪ್ಪಿದ್ದಾರೆ. ಗುಂಡಿಗಳಿಂದ ಮೃತಪಟ್ಟ ಇತಿಹಾಸವೇ ಇರಲಿಲ್ಲ. ಯಾವ್ದೋ ಒಂದೋ ಎರಡು ಬಿಟ್ಟರೆ ಇಷ್ಟು ಸಾವು ಆಗ್ತ ಇರಲಿಲ್ಲ. ಬೆಂಗಳೂರು ಬಗ್ಗೆ ಸಿಎಂ ಸರಿಯಾಗಿ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಹೊರಟ್ಟಿ ಬಿಜೆಪಿಗೆ ಬಂದರೆ ಸ್ವಾಗತ: ಶಿವರಾಮ್ ಹೆಬ್ಬಾರ್

Comments

Leave a Reply

Your email address will not be published. Required fields are marked *