ಕೊಪ್ಪಳ: ಇತ್ತೀಚೆಗೆ ನಡೆದ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿ ಸಲ್ಮಾನ್ ಬಿಜೆಪಿ ಮುಖಂಡನಿಗೆ ಕೊಲೆ ಬೆದರಿಕೆ ಹಾಕಿರೋ ವಿಡಿಯೋ ವೈರಲ್ ಆಗಿದೆ.
ಕೊಪ್ಪಳದ ಗಂಗಾವತಿ ನಗರಸಭೆ ನಾಮನಿರ್ದೇಶಿತ ಸದಸ್ಯನೂ ಆಗಿರುವ ಸಲ್ಮಾನ್ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮುಖಂಡ ಸೈಯದ್ ಅಲಿ ಮತ್ತು ಆತನ ಏಕೈಕ ಪುತ್ರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಬಗ್ಗೆ ಟೀಕೆ ಮಾಡಿದ್ರೆ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಸಲ್ಮಾನ್ ಕೂಡ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬಲಗೈ ಬಂಟ. ಕೇವಲ ಸೈಯದ್ ಅಲಿ ಮಾತ್ರವಲ್ಲ. ಪತ್ರಕರ್ತರು ಮತ್ತು ವಿರೋಧ ಪಕ್ಷದ ಸಾಕಷ್ಟು ಮುಖಂಡರಿಗೆ ಸಲ್ಮಾನ್ ಫೇಸ್ ಬುಕ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆ ಹಾಕುವುದು ಸಾಮಾನ್ಯವಾಗಿದೆ. ಇದನ್ನೂ ಓದಿ: ಬ್ಯಾಟರಿ ಕದ್ದು ಸಿಕ್ಕಿಬಿದ್ದ ಇಕ್ಬಾಲ್ ಅನ್ಸಾರಿ ಆಪ್ತ? ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ
ಗಂಗಾವತಿ ಪೊಲೀಸರು ಮಾತ್ರ ಸಲ್ಮಾನ್‍ಸ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದಕ್ಕೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕುಮ್ಮಕ್ಕು ಕಾರಣ ಎನ್ನಲಾಗಿದೆ. ಅಲ್ಲದೇ ಸ್ವತಃ ಮಾಜಿ ಶಾಸಕ ಕರೆ ಮಾಡಿ, ಪ್ರಕರಣ ದಾಖಲಿಸದಂತೆ ಒತ್ತಡ ಹಾಕ್ತಾರೆ ಎಂಬ ಆರೋಪಗಳು ಸಹ ಕೇಳಿ ಬಂದಿದೆ.
https://www.youtube.com/watch?v=1yfjpJhvomg



Leave a Reply