ಬೊಮ್ಮಾಯಿಯಿಂದ ಶಿವಾಜಿ ಪುತ್ಥಳಿ ಲೋಕಾರ್ಪಣೆ – ಲಕ್ಷ್ಮಿ ಹೆಬ್ಬಾಳ್ಕರ್ ಗೈರು

ಬೆಳಗಾವಿ: ರಾಜಹಂಸಗಡ ಕೋಟೆ ಅಭಿವೃದ್ಧಿ, ಶಿವಾಜಿ ಮೂರ್ತಿಯನ್ನು ಅಧಿಕೃತವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಲೋಕಾರ್ಪಣೆ ಮಾಡಿದರು.

ತಾಲೂಕಿನ ಗ್ರಾಮೀಣ ವಿಧಾನಸಭಾ ಕ್ಷೇತ್ರ‌ ವ್ಯಾಪ್ತಿಯ ರಾಜಹಂಸಗಡ ಕೋಟೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಂದ ಅಧಿಕೃತ ಲೋಕಾರ್ಪಣೆ ಮಾಡಿದರು. ಕೋಟೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಗೋವಿಂದ ಕಾರಜೋಳ (Govind Karjol), ಸಂಸದೆ ಮಂಗಲಾ ಅಂಗಡಿ, ಶಾಸಕ ಅಭಯ್ ಪಾಟೀಲ್, ಮಾಜಿ ಸಚಿವ ರಮೇಶ್ ಜಾರಕಿಹೋಳಿ (Ramesh Jarkiholi) ಭಾಗಿಯಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕೊನೆಯ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಭಾಗಿಯಾಗದೇ ಗೈರಾಗಿದ್ದಾರೆ. ಇದನ್ನೂ ಓದಿ: ನಡುರಾತ್ರಿ ರಸ್ತೆ ಗುಂಡಿಗಳ ಮುಚ್ಚಿದ ನಟಿ : ಕಾರುಣ್ಯ ರಾಮ್ ಕೆಲಸಕ್ಕೆ ಮೆಚ್ಚುಗೆ

ತಮ್ಮದೇ ಕ್ಷೇತ್ರದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಮನ ಸೆಳೆದರು. ಇತ್ತ ಇಬ್ಬರೂ ಬದ್ಧ ವೈರಿಗಳಾದ ರಮೇಶ್ ಜಾರಕಿಹೊಳಿ‌ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ ವೇದಿಕೆ ಕಾಣಿಸಿಕೊಳ್ಳವ ಲೆಕ್ಕಾಚಾರ ಇತ್ತು. ಆದ್ರೆ, ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಭಾಗಿಯಾಗಿದ್ದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೈರಾಗಿದ್ದಾರೆ. ಇದನ್ನೂ ಓದಿ: ಅತಂತ್ರ ಪ್ರಜಾ ತೀರ್ಪು; 2018ರ ವಿಧಾನಸಭಾ ಚುನಾವಣೆಯಲ್ಲೇನಾಗಿತ್ತು?

Comments

Leave a Reply

Your email address will not be published. Required fields are marked *