ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ 100% ಟ್ಯಾಕ್ಸ್ ವಿನಾಯಿತಿ : ಬೊಮ್ಮಾಯಿ

ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ ಶೇ.100 ಟ್ಯಾಕ್ಸ್ ವಿನಾಯಿತಿ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಯಾವ ಪರಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿಯಾಗಿತ್ತು ಎನ್ನುವದನ್ನ ತೋರಿಸಿದ್ದಾರೆ. ಅದೆಷ್ಟೂ ಜನ ಉಗ್ರರ ಕೈಲಿ ಸಿಕ್ಕಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಕಾಶ್ಮೀರದಲ್ಲಿ 370ಯನ್ನ ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿದರು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ ಶೇ.100 ಟ್ಯಾಕ್ಸ್ ವಿನಾಯಿತಿ ನೀಡುತ್ತೇವೆ. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಾಜಿ ನಗರದಲ್ಲಿರೋ ಒರಾಯನ್ ಮಾಲ್‍ನಲ್ಲಿ ಬೊಮ್ಮಾಯಿ ಅವರು ದಿ ಕಾಶ್ಮೀರಿ ಫೈಲ್ಸ್ ಹಿಂದಿ ಸಿನಿಮಾ ವೀಕ್ಷಿಸಿದ್ದಾರೆ. ಮಾಜಿ ಸಚಿವ ಆನಂತ್ ಕುಮಾರ್ ಪತ್ನಿ ತೇಜಸ್ವಿನಿ, ಹಿರಿಯ ನಟಿ ಸುಧಾರಾಣಿ, ಸಿಹಿಕಹಿ ಚಂದ್ರು, ಕೆಎಸ್ ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್, ಸೇರಿ ಹಲವು ಮಂದಿ ಸಾಥ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *