ನಾಳೆಯ ಸಂಪುಟ ಸಭೆಯಲ್ಲಿ ಬಿಗಿ ನಿಯಮಗಳ ಬಗ್ಗೆ ಚರ್ಚೆ: ಬೊಮ್ಮಾಯಿ

ಬೆಂಗಳೂರು: ಇವತ್ತು ಅನೌಪಚಾರಿಕವಾಗಿ ಎಲ್ಲ ಸ್ಥಿತಿಗತಿ, ಮಾಹಿತಿ ಪಡೆದುಕೊಳ್ಳುತ್ತೇನೆ. ಕೋವಿಡ್ ಬಗ್ಗೆ ಮಾಹಿತಿ ಪಡ್ಕೊಂಡು ನಾಳೆ ಸಂಪುಟ ಸಭೆಯಲ್ಲಿ ಬಿಗಿ ನಿಯಮಗಳ ಚರ್ಚೆ ಮಾಡುತ್ತೆವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಅದರಲ್ಲಿ ನವೆಂಬರ್ ತಿಂಗಳಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿ ಮಾಹಿತಿ ಪಡೆಯುತ್ತೇನೆ. ನಾಳೆ ಸಚಿವ ಸಂಪುಟ ಸಭೆ ಕರೆದಿದ್ದು ಅದರಲ್ಲಿ ಮುಂದಿನ ಕ್ರಮಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಸುತ್ತೇವೆ. ರಾಜ್ಯಕ್ಕೆ ಬೇಕಾದ ಮಾರ್ಗಸೂಚಿ, ಕ್ರಮಗಳನ್ನು ತರಲಾಗುವುದು. ಕೆಲ ಜಿಲ್ಲೆಗಳಲ್ಲಿ ಕೋವಿಡ್ ಇದೆ, ಕೆಲ ಜಿಲ್ಲೆಗಳಲ್ಲಿ ಇಲ್ಲ, ಎಲ್ಲ ಪರಾಮರ್ಶೆ ನಡೆಸುತ್ತೇವೆ. ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಗ್ಗೆಯೂ ಸೇರಿದಂತೆ ಎಲ್ಲ ಸೂಚನೆ ಒಳಗೊಂಡಿರುವ ಮಾರ್ಗಸೂಚಿ ಬಗ್ಗೆ ನಾಳೆ ಚರ್ಚೆ ಮಾಡಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:  ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ

basavaraj bommai

ಕ್ರಿಸ್ ಮಸ್, ಹೊಸವರ್ಷಾಚರಣೆ ಬಗ್ಗೆ ಕೂಡ ನಿರ್ಧಾರ ಕೈಗೊಳ್ಳಲಾಗುವುದು. ಯಾರು ಆತಂಕ ಪಡುವ ಸ್ಥಿತಿ ಏನಿಲ್ಲ, ಅಗತ್ಯವೂ ಇಲ್ಲ. ಪೋಷಕರು ಕೂಡ ಆತಂಕ ಪಡಬಾರದು. ಮಕ್ಕಳನ್ನು ಜಾಗೃತರಾಗಿ ನೋಡಿಕೊಳ್ಳಬೇಕು. ಶಾಲೆಯಲ್ಲಿ ಸ್ವಚ್ಚತೆ ಹಾಗೂ ಶಾಲೆಯಲ್ಲಿ ಕೊವೀಡ್ ಮಾರ್ಗಸೂಚಿ ಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ:  ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

ವಸತಿ ಶಾಲೆಯಲ್ಲಿ ಕೊವೀಡ್ ಪರಿಸ್ಥಿತಿ ಬಗ್ಗೆ ವಿವರ ಪಡೆಯುತ್ತೇವೆ. ಶಾಲೆ, ಹಾಸ್ಟೆಲ್ ಎಲ್ಲ ಒಳಗೊಂಡಂತೆ ಮಾರ್ಗಸೂಚಿ ಹೊರಡಿಸಲಾಗುವುದು.ಇವತ್ತಿನ ಸ್ಥಿತಿ ಗತಿ ನೋಡಿ, ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಒಮಿಕ್ರಾನ್ ಇದೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ನಿಯಂತ್ರಣದಲ್ಲಿದೆ. ಹೀಗಾಗಿ ಮಾರ್ಗಸೂಚಿ ತಂದ್ರೆ ಇಡೀ ರಾಜ್ಯಕ್ಕೆ ತರಬೇಕಾಗುತ್ತದೆ. ಕೇಂದ್ರದವ್ರು ಕೂಡ ಕೆಲ ಮಾರ್ಗಸೂಚಿ ಹೊರಡಿಸಿದ್ದಾರೆ. ಹೀಗಾಗಿ ಇವೆಲ್ಲವನ್ನು ಪರಮಾರ್ಶಿಸಿ, ಬರುವಂತ ಡಿಸೆಂಬರ್, ಜನವರಿ ವರೆಗೆ ನಿಯಂತ್ರಣ ಮಾಡಲು ಮಾರ್ಗಸೂಚಿ ಹೊರಡಿಸುತ್ತೇವೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *