ಸಿಎಂ ಕುಮಾರಸ್ವಾಮಿ ಒಬ್ಬ ನಗರ ನಕ್ಸಲೈಟ್: ಶಾಸಕ ಯತ್ನಾಳ್ ಕಿಡಿ

ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಂಗೆಗೆ ಪ್ರಚೋದನೆ ನೀಡುತ್ತಾರೆ. ಹೀಗಾಗಿ ಅವರೊಬ್ಬ ನಗರ ನಕ್ಸಲೈಟ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬುದ್ಧಿಜೀವಿ ಎಂದು ಹೇಳಿಕೊಂಡಿದ್ದ ಕೆಲವು ನಗರ ನಕ್ಸಲೈಟ್‍ರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಅವರಂತೆ ಎಚ್.ಡಿ.ಕುಮಾರಸ್ವಾಮಿ ಕೂಡಾ ನಗರ ನಕ್ಸಲೈಟ್ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರನ್ನು ಸಮೀಪದಿಂದ ನೋಡಿದ್ದೇನೆ. ಅವರು ಸುಳ್ಳು ಕಾಗದ ಪತ್ರಗಳನ್ನು ಸೃಷ್ಟಿಸಿ, ಇತರರನ್ನು ಹೆದರಿಸುತ್ತಾರೆ. ಈಗಾಗಲೇ ಅವರ ಸುತ್ತ ಅನೇಕ ಹಗರಣಗಳಿದ್ದು, ಜಂತಕಲ್ ಮೈನಿಂಗ್ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಸದ್ಯದಲ್ಲಿಯೇ ಕುಮಾರಸ್ವಾಮಿ ಜೈಲು ಸೇರಲಿದ್ದಾರೆ ಎಂದು ಯತ್ನಾಳ್ ಭವಿಷ್ಯ ನುಡಿದರು. ಇದನ್ನು ಓದಿ: ರಾಹುಲ್ ಗಾಂಧಿ ಒಬ್ಬ ಅರೆ ಹುಚ್ಚ, ಅಯೋಗ್ಯ ಯತ್ನಾಳ್ ವ್ಯಂಗ್ಯ

ಇದೇ ವೇಳೆ ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಶಾಸಕರು, ಜೆಡಿಎಸ್ ಶಾಸಕರು ಹಾಗೂ ನಾಯಕರು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದಿಂದ ಹೊರಗೆ ಬರುವ ಪರಿಸ್ಥಿತಿಯಲ್ಲಿ ಇಲ್ಲ. ಒಂದು ವೇಳೆ ಹೊರಗೆ ಬಂದರೆ ಅವರನ್ನು ಮುಗಿಸಿ ಬಿಡುತ್ತಾರೆ. ದೇವೇಗೌಡ ಅವರು ಯಾರ ತಲೆಯ ಮೇಲೆ ಕೈ ಇಡುತ್ತಾರೋ ಅವರ ಕಥೆ ಮುಗಿದಂತೆ ಎಂದು ಲೇವಡಿ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *