ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ಸಿಬ್ಬಂದಿಗೆ ಗನ್ ತೋರಿಸಿದ ದರೋಡೆಕೋರರು- ವಿಡಿಯೋ ನೋಡಿ

ಬೀದರ್: ಶನಿವಾರದಂದು ಸಿನಿಮೀಯ ರೀತಿಯಲ್ಲಿ 6 ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಸಿಟಿವಿಗೆ ಸ್ಪ್ರೇ ಮಾಡಿ ದರೋಡೆಗೆ ಯತ್ನಿಸಿದ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಜಿಲ್ಲೆಯ ಮಡಿವಾಳ ವೃತ್ತದಲ್ಲಿರುವ ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ದರೋಡೆ ಮಾಡಲು 6 ಮಂದಿ ಯತ್ನಿಸಿದ್ದರು. ಬೆಳಗ್ಗೆ 9 ಗಂಟೆ ಸಮಯದಲ್ಲಿ ಆಗಮಿಸಿದ್ದ ಖದೀಮರು, ಮೊದಲೇ ಪ್ಲಾನ್ ರೂಪಿಸಿಕೊಂಡು ಏಕಾಏಕಿ ಬ್ಯಾಂಕ್ ಪ್ರವೇಶ ಮಾಡಿದ್ದರು. ಇದಾದ ಬಳಿಕ ಕೆಲ ಸಮಯದಲ್ಲೇ ಬ್ಯಾಂಕ್‍ನಿಂದ ಹೊರ ಬಂದ ಆರೋಪಿಗಳು ಕಾರು ಹತ್ತಿ ಪರಾರಿಯಾಗಲು ಸಿದ್ಧರಾಗಿದ್ದರು. ಈ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಬ್ಯಾಂಕ್ ಮುಂದೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿತ್ತು. ಆದರೆ ಕ್ಷಣ ಮಾತ್ರದಲ್ಲಿ ಪೊಲೀಸರನ್ನು ಕಣ್ಣು ತಪ್ಪಿಸಿದ ಖದೀಮರು ಕಾರಿನ ಸಮೇತ ಪರಾರಿಯಾಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ಒಳಗೆ ಖದೀಮರು ಮಾಡಿದ ದುಷ್ಕೃತ್ಯದ ವಿಡಿಯೋ ಇಂದು ಲಭ್ಯವಾಗಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಫುಲ್‍ಪ್ಲಾನ್ ಮಾಡಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ಬ್ಯಾಂಕ್ ಒಳ ನುಗ್ಗಿದ ದರೋಡೆಕೋರರು ಸಿಬ್ಬಂದಿ ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಹೆದರಿಸಿದ್ದಾರೆ. ಅಲ್ಲದೆ ಬ್ಯಾಂಕ್ ಒಳಗೆ ಬಂದಂತೆ ಅಲ್ಲಿನ ಸಿಸಿ ಕ್ಯಾಮೆರಾಗೆ ಸ್ಪ್ರೇ ಮಾಡಿ ದರೋಡೆ ಮಾಡಲು ಯತ್ನಿಸಿದ್ದಾರೆ. ದರೋಡೆಕೋರರು ಬೆದರಿಸುತ್ತಿರುವ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ದೊರಕಿದೆ.

https://www.youtube.com/watch?v=xDwDxv7oGts

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *