ರಶಿಯನ್ ಯುವತಿಯನ್ನ ಅತ್ಯಾಚಾರಗೈದ ಬ್ಯಾಂಕ್ ಮ್ಯಾನೇಜರ್

ಲಕ್ನೋ: ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಒಬ್ಬ 20 ವರ್ಷದ ರಶಿಯನ್ ಯುವತಿಯನ್ನು ಅತ್ಯಾಚಾರಗೈದಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಬೃಂದಾವನ ಪಟ್ಟಣದಲ್ಲಿ ನಡೆದಿದೆ.

ಬೃಂದಾವನ ಪಟ್ಟಣದ ಯುಸಿಓ ಬ್ಯಾಂಕ್ ಮ್ಯಾನೇಜರ್ ಮಹೇಂದ್ರ ಪ್ರಸಾದ್ ಸಿಂಗ್ ಎಂಬಾತನೇ ಅತ್ಯಾಚಾರಗೈದ ಕಾಮುಕ. ಫೇಸ್ ಬುಕ್ ನಲ್ಲಿ ಯುವತಿಯನ್ನು ಪರಿಚಯಿಸಿಕೊಂಡ ಮಹೇಂದ್ರ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದನು. ಸೆಪ್ಟಂಬರ್ ನಲ್ಲಿ ಯುವತಿ ಭಾರತಕ್ಕೆ ಭೇಟಿ ನೀಡಿದ್ದಾಗ, ಈ ವೇಳೆ ಪರಿಚಯನಾಗಿದ್ದ ಮಹೇಂದ್ರ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸೆಗಿದ್ದಾನೆ.

ಫೇಸ್‍ಬುಕ್ ನಲ್ಲಿ ಪರಿಚಯ: ಮಹೇಂದ್ರ 2016 ನವೆಂಬರ್ ನಿಂದ ಯುವತಿಯನ್ನು ಫೇಸ್‍ಬುಕ್ ನಲ್ಲಿ ಪರಿಚಯ ಮಾಡಿಕೊಂಡಿದ್ದನು. ಈ ವೇಳೆ ಪ್ರತಿನಿತ್ಯ ಪರಸ್ಪರ ಚಾಟ್ ಸಹ ಮಾಡುತ್ತಿದ್ದರು. ಪರಿಚಯದ ಬಳಿಕ ಮಹೇಂದ್ರ ಯುವತಿಗೆ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಾನೆ. ಸೆಪ್ಟಂಬರ್ ತಿಂಗಳಲ್ಲಿ ಭಾರತಕ್ಕೆ ಬಂದ ಯುವತಿ ಬೃಂದಾವನದ ಹೋಟೆಲನಲ್ಲಿ ಉಳಿದುಕೊಂಡಿದ್ದರು.

ಬೃಂದಾವನಕ್ಕೆ ಬಂದ ಯುವತಿಯನ್ನು ಮನೆಗೆ ಕರೆಸಿ ರೇಪ್ ಮಾಡಿದ್ದಾನೆ. ಘಟನೆ ನಂತರ ಯುವತಿಗೆ ಬೃಂದಾವನದಲ್ಲಿ ಮತ್ತೊಬ್ಬ ಮಹಿಳೆಯ ಸಲಹೆಯಂತೆ ಮಹೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬಳಿಕ ಪೊಲೀಸರು ಆರೋಪಿ ಮಹೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಯುವತಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Comments

Leave a Reply

Your email address will not be published. Required fields are marked *