ಪ್ರವಾದಿ ಮೊಹಮ್ಮದ್ ಇದ್ದಿದ್ದರೆ…: ಭುಗಿಲೆದ್ದ ಪ್ರತಿಭಟನೆಗೆ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ

ಢಾಕಾ: ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಮಾಡಿರುವ ಹಿನ್ನೆಲೆ ಭುಗಿಲೆದ್ದಿರುವ ಹಿಂಸಾಚಾರವನ್ನು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಖಂಡಿಸಿದ್ದಾರೆ.

ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದು, ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ. ಈ ಪ್ರತಿಭಟನೆಯನ್ನು ತಸ್ಲೀಮಾ ನಸ್ರೀನ್ ಟ್ವೀಟ್‌ನಲ್ಲಿ ಖಂಡಿಸಿದ್ದಾರೆ.

ಪ್ರವಾದಿ ಮೊಹಮ್ಮದ್ ಇಂದಿಗೂ ಜೀವಂತವಾಗಿದ್ದರೆ, ಪ್ರಪಂಚದಾದ್ಯಂತ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೋಡಿ ಅವರೇ ಆಘಾತಕ್ಕೊಳಗಾಗುತ್ತಿದ್ದರು ಎಂದು ನಸ್ರೀನ್ ಹಿಂಸಾಚಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ನಾಳೆ ದೇಶಾದ್ಯಂತ ಕಾಂಗ್ರೆಸ್ ಮಹತ್ವದ ಸುದ್ದಿಗೋಷ್ಠಿ

ನೂಪುರ್ ಶರ್ಮಾ ಅವರ ಹೇಳಿಕೆಗೆ ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಪ್ರತಿಭಟನಾಕಾರರು ನೂಪುರ್ ಅವರನ್ನು ಬಂಧಿಸಬೇಕೆಂದು ಹಾಗೂ ಕೆಲವರು ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದರೆ. ಇದನ್ನೂ ಓದಿ: ಪ್ರವಾದಿಯನ್ನು ಅವಹೇಳನಗೈದ ನೂಪುರ್ ಶರ್ಮಾರನ್ನು ಗಲ್ಲಿಗೇರಿಸಿ: ಎಐಎಂಐಎಂ

ಈ ವಿವಾದ ನೆರೆಯ ಬಾಂಗ್ಲಾದೇಶಕ್ಕೂ ಹಬ್ಬಿದ್ದು, ಶುಕ್ರವಾರ ಸಾವಿರಾರು ಜನರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂಪುರ್ ಶರ್ಮಾರನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲದೇ ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಘೋಷಣೆ ಕೂಗಿದ್ದಾರೆ. ಪ್ರತಿಭಟನಾಕಾರರು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೂ ಕರೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *