ಅಕ್ರಮವಾಗಿ ವಲಸೆ ಬಂದ ಬಾಂಗ್ಲಾ ಪ್ರಜೆಗಳಿಗೂ ಸಿಗುತ್ತೆ ಆಧಾರ್ ಕಾರ್ಡ್, 2200 ರೂ. ಕೊಟ್ರೆ ಪಾಸ್‍ಪೋರ್ಟ್

ಬೆಳಗಾವಿ: ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಇವೆಲ್ಲ ನಮ್ಮ ಅಧಿಕೃತ ಗುರುತಿನ ದಾಖಲೆಗಳು. ನಾವು ಭಾರತೀಯರು ಅನ್ನೋದನ್ನು ಖಾತ್ರಿಪಡಿಸುವುದಕ್ಕೆ ಇರೋ ದಾಖಲೆಗಳು. ಆದ್ರೆ ಗಡಿ ನಾಡು ಬೆಳಗಾವಿಯಲ್ಲಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದಿರುವ ಮಂದಿಗೆಲ್ಲಾ ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಮಾಡಿಸಿಕೊಡುವ ದಂಧೆ ನಡೆಯುತ್ತಿದೆ.

ಅದ್ರಲ್ಲೂ ಪಾಸ್‍ಪೋರ್ಟ್ ಪಡೆಯುವುದು ಇನ್ನೂ ಸುಲಭ. ಕೇವಲ 2200 ರೂಪಾಯಿ ಖರ್ಚು ಮಾಡಿದ್ರೆ ಸಾಕು ವಿದೇಶಿಯರಿಗೆ ನಮ್ಮ ದೇಶದ ಪಾಸ್ ಪೋರ್ಟ್ ಸಿಗುತ್ತೆ. ಇಂತಹದ್ದೊಂದು ದೊಡ್ಡ ದಂದೆ ಬೆಳಗಾವಿಯಲ್ಲಿ ತಲೆ ಎತ್ತಿದೆ. ಸ್ವತಃ ಪಾಸ್‍ಪೋರ್ಟ್ ಪಡೆದ ಬಾಂಗ್ಲಾದೇಶದ ಪ್ರಜೆಯೇ ಈ ಭಯಾನಕ ಸತ್ಯವನ್ನ ಬಾಯಿಬಿಟ್ಟಿದ್ದಾನೆ.

ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರು ನಕಲಿ ಪಾಸ್‍ಪೋರ್ಟ್ ಮೂಲಕ ಪುಣೆಯ ಮಾರ್ಗವಾಗಿ ದುಬೈಗೆ ಹಾರಲು ಯತ್ನಿಸಿದ್ದ 11 ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದರು. ಅಂಜುಬೇಗಂ (37), ಹಫೀಜುಲ್ಲಾ ಇಸ್ಲಾಂ(20), ಅಕೀಬ (20), ಅನ್ನನ್ ಸದ್ದಾರ್ (21), ರೋಹನ್ ಸೆಕ್ (21), ಅಬ್ದುಲ್ ಹಾಯ್ ನಿಹಾರ ಅಲಿ ಗಾಜಿ (60), ಮೊಹಮ್ಮದ್ ಅಲಮಿನ್ ಶೌಪಿ ಉದ್ದಿನ್ ಬೇಪಾರಿ (26) ಸೇರಿದಂತೆ 11 ಆರೋಪಿಗಳನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ಮಾಹಿತಿ ಜಾಡು ಹಿಡಿದ ಬೆಳಗಾವಿ ಪೊಲೀಸರು, ನಗರದಲ್ಲಿ ನಡೆಯುತ್ತಿರುವ ನಕಲಿ ದಾಖಲಾತಿಯ ಮಾಫಿಯ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

ಸ್ವತಃ ಹಬಿಬುಲ್ ಶೇಖ್ ಅನ್ನೋ ಬಾಂಗ್ಲಾದೇಶಿ ಪ್ರಜೆ ಅಕ್ರಮವಾಗಿ ಪಾಸ್‍ಪೋರ್ಟ್ ಪಡೆದು ಆರೇಳು ವರ್ಷಗಳಿಂದ ಬೆಳಗಾವಿಯಲ್ಲಿ ವಾಸಿಸುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣ ಸಂಪೂರ್ಣ ತನಿಖೆಯಾದರೆ ಇನ್ನಷ್ಟು ಜನ ಬಾಂಗ್ಲಾದೇಶದ ನುಸುಳುಕೊರರು ಬಂಧಿತರಾಗಲಿದ್ದಾರೆ.

https://www.youtube.com/watch?v=x_uURstQ6uk

 

Comments

Leave a Reply

Your email address will not be published. Required fields are marked *