ಸಿಲಿಕಾನ್ ಸಿಟಿಯಲ್ಲಿ ಲಾಂಗು-ಮಚ್ಚು ಹಾವಳಿ: ಮೂವರು ಪುಡಿರೌಡಿಗಳು ಅರೆಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಹಾವಳಿ ಮಾಡುವ ಪುಂಡರ ಸಂಖ್ಯೆ ಹೆಚ್ಚುತ್ತಿದೆ. ಅಪರಾಧ ವಿಭಾಗಕ್ಕೆ ಖಡಕ್ ಐಪಿಎಎಸ್ ಅಧಿಕಾರಿ ಅಲೋಕ್ ಕುಮಾರ್ ಬಂದಿದ್ದು, ದಾಳಿ ಮಾಡಿ ರೌಡಿಗಳಿಗೆ ಪಾಠ ಕಲಿಸುತ್ತಿದ್ದಾರೆ.

ದೊಡ್ಡ ದೊಡ್ಡ ರೌಡಿಗಳೆಲ್ಲಾ ಪತರಗುಟ್ಟುತ್ತಿದ್ದಾರೆ. ಆದರೆ ಪುಡಿರೌಡಿಗಳಿಗೆ ಅಲೋಕ್ ಬಿಸಿ ತಾಗಿದಂತಿಲ್ಲ. ಕೆಲ ಪುಡಿ ರೌಡಿಗಳು, ಮಲ್ಲೇಶ್ವರಂನ ಬಿಜೆಪಿ ಕಚೇರಿ ಹಾಗೂ ವೈಯ್ಯಾಲಿ ಕಾವಲ್‍ನ ಸುತ್ತುಮುತ್ತ ಭಯದ ವಾತಾವರಣ ಸೃಷ್ಠಿಸಿದ್ದಾರೆ.

ರೌಡಿ ಹರೀಶ್ ಮಾರಕಾಸ್ತ್ರ ಹಿಡಿದು ರೌಡಿಸಂ ಮಾಡುತ್ತಿದ್ದ ಚಿಲ್ಟುಗಳಿಗೆ ಅವಾಜ್ ಹಾಕಿದ್ದರಂತೆ. ಇದರಿಂದಾಗಿ ಕೆರಳಿದ ಪುಡಿ ರೌಡಿಗಳಾದ ಮಂಜುನಾಥ್, ಅಕ್ಷಯ್, ಚಿನ್ನಿ ಮತ್ತು ಗ್ಯಾಂಗ್ ಲಾಂಗು ಹಿಡಿದುಕೊಂಡು ಹರೀಶ್‍ನ ಅಪ್ಪಳ ಮನೆ ಮುಂದೆ ದಾಳಿ ನಡೆಸಿದ್ದಾರೆ. ರೌಡಿ ಹರೀಶ್ ಮನೆಯ ಮುಂದೆ ಹೀಗೆ ಮಾಡಿದರೆ ಹೆಸರು ಗಿಟ್ಟಿಸಿಕೊಳ್ಳಬಹುದು ಎನ್ನುವ ಹುಚ್ಚುತನದಿಂದ ಹೀಗೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಾಳಿಯ ವೇಳೆ ಪುಡಿ ರೌಡಿಗಳು ಅಂಗಡಿ ಮಾಲೀಕರ ಮೇಲೆ ಮಚ್ಚು ಬೀಸಲು ಯತ್ನಿಸಿ ವಿಫಲರಾಗಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಜುನಾಥ್, ಚಿನ್ನಿ, ಅಕ್ಷಯ್‍ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *