ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್ ನಟ ಸಿದ್ಧಾಂತ್ ಕಪೂರ್, ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂದು ಸಿದ್ಧಾಂತ್ ಪರ ವಕೀಲರು ತಿಳಿಸಿದ್ದಾರೆ. ಸ್ಟೇಶನ್ ಬೇಲ್ ಕೊಡುವಂತಹ ಅಪರಾಧ ಅದಾಗಿದ್ದರಿಂದ, ಕಾನೂನು ರೀತಿಯಲ್ಲೇ ಎಲ್ಲವೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸತತ ಎರಡು ದಿನಗಳಿಂದ ಪೊಲೀಸ್ ವಿಚಾರಣೆಯನ್ನು ಎದುರಿಸುತ್ತಿರುವ ಬಾಲಿವುಡ್ ನಟ ಸಿದ್ಧಾಂತ್, ತಾನು ಪದೇ ಪದೇ ಬೆಂಗಳೂರಿಗೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಹಲವಾರು ಪಾರ್ಟಿಗಳನ್ನು ಪಾಲ್ಗೊಂಡ ಬಗ್ಗೆಯೂ ವಿವರ ನೀಡಿದ್ದಾನೆ. ಯಾವತ್ತೂ ತಾವು ಡ್ರಗ್ಸ್ ಸೇವಿಸಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

ನಾನು ಪ್ರಜ್ಞಾಪೂರ್ವಕವಾಗಿ ಯಾವತ್ತೂ ಡ್ರಗ್ಸ್ ಸೇವಿಸಿಲ್ಲ. ಮೊನ್ನೆ ನಡೆದ ಪಾರ್ಟಿಯಲ್ಲೂ ನಾನು ಡ್ರಗ್ಸ್ ಸೇವಿಸಿಲ್ಲ. ಪೊಲೀಸರು ಹೇಳುತ್ತಿರುವ ಆರೋಪಿಗಳಲ್ಲಿ ನನ್ನ ಹೆಸರು ಇದೆ. ಹಾಗಾಗಿ ಸಿಗರೇಟ್ ಅಥವಾ ಮದ್ಯದಲ್ಲಿ ಏನಾದರೂ ಡ್ರಗ್ಸ್ ಹಾಕಿಕೊಟ್ಟಿರಬಹುದಾ ಗೊತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನುತ್ತಿವೆ ಮೂಲಗಳು. ತನಿಖೆಯ ವೇಳೆ ಎಲ್ಲ ರೀತಿಯಿಂದಲೂ ಪೊಲೀಸರಿಗೆ ಸಹಕರಿಸಿರುವುದಾಗಿ ಹೇಳಿದ್ದಾನೆ.  ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧಾಂತ್, ‘ಬೆಂಗಳೂರು ಪೊಲೀಸರು ತುಂಬಾ ಒಳ್ಳೆಯವರು. ನನ್ನೊಂದಿಗೆ ಯಾವುದೇ ರೀತಿಯಲ್ಲೂ ಅವರು ಕೆಟ್ಟ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ತುಂಬಾ ಗೌರವದಿಂದ ಕಂಡರು. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಎಷ್ಟು ಬಾರಿ ಕರೆದರೂ, ನಾನು ತನಿಖೆಗೆ ಸಹಕರಿಸುತ್ತೇನೆ” ಎಂದರು.

Comments

Leave a Reply

Your email address will not be published. Required fields are marked *