ಬೆಂಗಳೂರು: ನಡುರಸ್ತೆಯಲ್ಲೇ ಮಾನಸಿಕ ಅಸ್ವಸ್ಥನನ್ನು ದುಷ್ಕರ್ಮಿಗಳು ಮನಬಂದಂತೆ ಥಳಿಸಿರೋ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ.
ದುಷ್ಕರ್ಮಿಗಳು ಮಾನಸಿಕ ಅಸ್ವಸ್ಥತನನ್ನು ಶನಿವಾರ ದೊಣ್ಣೆಯಿಂದ ಥಳಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾನಸಿಕ ಅಸ್ವಸ್ಥ ಎಷ್ಟು ಬೇಡಿಕೊಂಡ್ರು ಬಿಡದೆ ಮನಬಂದಂತೆ ಥಳಿಸಿದ್ದಾರೆ. ಆದ್ರೆ ಈ ವೇಳೆ ಸ್ಥಳದಲ್ಲಿದ್ದವರು ಕೇವಲ ನಿಂತು ನೋಡುತ್ತಿದ್ದರೇ ಹೊರತು ಅಸ್ವಸ್ಥ ವ್ಯಕ್ತಿಯ ಸಹಾಯಕ್ಕೆ ಬಾರದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಮಾನಸಿಕ ಅಸ್ವಸ್ಥನನ್ನು ಕಾಪಾಡಲು ಬೀದಿ ನಾಯಿಯೊಂದು ಪರದಾಟ ನಡೆಸಿರುವುದನ್ನು ಕೂಡ ವೀಡಿಯೋದಲ್ಲಿ ನೋಡಬಹುದು. ನಾಯಿಗಿರುವ ಮಾನವೀಯತೆ, ಮನುಷ್ಯರಿಗೆ ಇಲ್ಲವಾಯ್ತ? ಅಂತ ವೀಡಿಯೋ ನೋಡಿದವರು ಮರುಕ ವ್ಯಕ್ತಪಡಿಸಿದ್ದಾರೆ.
ಥಳಿತಕ್ಕೊಳಗಾದ ವ್ಯಕ್ತಿ ಯಾರು? ಈತನಿಗೆ ಯಾವ ಕಾರಣಕ್ಕೆ ಹೊಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Leave a Reply