ಯಡಿಯೂರಪ್ಪನವರೇ ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ – ಬಂಡೆಪ್ಪ ಕಾಶೆಂಪೂರ ವ್ಯಂಗ್ಯ

ಬೀದರ್: ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ ಯಡಿಯೂರಪ್ಪನವರೇ? ಆ ಸಿಹಿಯನ್ನು ಕರ್ನಾಟಕ ಅಥವಾ ದೆಹಲಿಯಿಂದ ತರುತ್ತೀರೋ ಇಲ್ಲಾ ವಿದೇಶದಿಂದ ಬರಬೇಕೇ ಎಂದು ಪ್ರಶ್ನಿಸಿ ಬಂಡೆಪ್ಪ ಕಾಶೆಂಪೂರ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ರಂಗಮಂದಿರದಲ್ಲಿ ನಡೆದ ಬಡವರ ಬಂಧು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಈಗಾಗಲೇ ಬಿಜೆಪಿಯ ಎಲ್ಲಾ ಬಾಂಬ್‍ಗಳು ಠುಸ್ಸಾಗಿದ್ದು, ಎಲ್ಲಾ ಅತೃಪ್ತ ಶಾಸಕರು ವಾಪಸ್ ಪಕ್ಷಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್‍ನ ಸಿಂಗಲ್ ಎಂಎಲ್‍ಎಗಳು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಈ ಆಟಕ್ಕೆ ರಾಜ್ಯದ ಜನ ಮುಂದೆ ತಕ್ಕ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

ಸಿಹಿ ಸುದ್ದಿ ಕೊಡುತ್ತೇವೆ ಎಂದು ಬಾಯಿ ಮಾತಿಗೆ ಹೇಳ್ತಾರೆ. ಯಡಿಯೂರಪ್ಪನವರೇ ಎಲ್ಲಿದೆ ಸಿಹಿ ಸುದ್ದಿ? ಕರ್ನಾಟಕದಲ್ಲಿ ಇದೆಯೇ? ದೆಹಲಿಯಲ್ಲಿ ಇದೆಯೋ? ಇಲ್ಲಾ ವಿದೇಶದಿಂದ ಬರಬೇಕೇ? ಇದೆಲ್ಲ ಬಿಜೆಪಿ ಅವರು ಜನರ ದಿಕ್ಕು ತಪ್ಪಿಸಲು ಮಾಡುತ್ತಿದ್ದಾರೆ. ಅವರ ಆಟ ನಡಿಯುವುದಿಲ್ಲ ಎಂದರು.

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಶ್ರೀಗಳ ಆರೋಗ್ಯ ಬೇಗ ಚೇತರಿಕೆಯಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಾನು ಕೂಡ ಹೋಗಿ ಶ್ರೀಗಳ ದರ್ಶನ ಪಡೆಯುವೆ. ಕರ್ನಾಟಕಕ್ಕೆ ನಡೆದಾಡುವ ದೇವರ ಕೊಡುಗೆ ಅಪಾರ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *