ಢಾಕಾ: ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 2ನೇ ಓವರ್ ವೇಳೆ ಮೊಹಮ್ಮದ್ ಸಿರಾಜ್ ಅವರ ಎಸೆತ ಅನಾಮುಲ್ ಬ್ಯಾಟ್ ಟಚ್ ಆಗಿ ಬಾಲ್ ಔಟ್‍ಸೈಡ್ ಸ್ಲಿಪ್‍ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಕಡೆ ಹೋಯಿತು. ಈ ವೇಳೆ ಬಾಲ್ ಪಿಚ್ ಆಗಿದೆ. ತಕ್ಷಣ ಹಿಡಿಯಲು ರೋಹಿತ್ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಹಿಟ್‍ಮ್ಯಾನ್ ಬ್ಯಾಟ್‍ನಲ್ಲಿ ಸೂರ್ಯ
https://t.co/SoOLqQYLn1#RohitSharma
— Shivam Rajvanshi (@social_timepass) December 7, 2022
ರೋಹಿತ್ ಬಾಲ್ ಹಿಡಿಯಲು ಮುಂದಾಗುತ್ತಿದ್ದಂತೆ ಕೈ ಬೆರಳಿಗೆ ಬಾಲ್ ಬಡಿದಿದೆ. ಜೋರಾಗಿ ಬಡಿದ ಕಾರಣ ಕೈ ಬೆರಳು ಮುರಿತಕ್ಕೊಳಗಾಗಿರುವ ಸಾಧ್ಯತೆ ಹೆಚ್ಚಿದೆ. ಕೂಡಲೇ ರೋಹಿತ್ ಕೈ ಬೆರಳಿನಲ್ಲಿ ರಕ್ತ ಸುರಿಸುತ್ತ ನೋವಿನಿಂದ ಮೈದಾನ ತೊರೆದರು. ಅವರ ಬದಲು ಫೀಲ್ಡಿಂಗ್‌ಗೆ ರಜತ್ ಪಾಟಿದಾರ್ ಆಗಮಿಸಿದ್ದು, ತಂಡದ ಉಪನಾಯಕ ಕನ್ನಡಿಗ ಕೆ.ಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಶಿಫಾಲಿ ಇದೀಗ U19 ಕ್ಯಾಪ್ಟನ್!

Leave a Reply