ಚೀನಾದ 54 ಆ್ಯಪ್‌ಗಳು ಬ್ಯಾನ್: ಕೇಂದ್ರ

ನವದೆಹಲಿ: ಭಾರತದ ಭದ್ರತೆಗೆ ಅಪಾಯವನ್ನುಂಟು ಮಾಡುವ ಚೀನಾದ ಆ್ಯಪ್‌ಗಳನ್ನು ನಿಷೇಧಿಸಲು ಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಸ್ವೀಟ್‌ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ವಿವಾ ವೀಡಿಯೋ ಎಡಿಟರ್‌, ಟೆನ್ಸೆಂಟ್‌ ಎಕ್ಸ್‌ರಿವರ್‌, ಒನ್‌ಮಿಯೋಜಿ ಅರೆನಾ, ಆಪ್‌ಲಾಕ್‌, ಡುಯೆಲ್‌ ಸ್ಪೇಸ್‌ ಲೈಟ್‌ ಸೇರಿದಂತೆ ಅನೇಕ ಆ್ಯಪ್‌ಗಳನ್ನು ನಿಷೇಧಿಸಲಾಗುವುದು ಎಂದು ಹೇಳಿವೆ. ಇದನ್ನೂ ಓದಿ: ಸೀಜ್ ಆಗಿದ್ದ 350ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

ಕಳೆದ ವರ್ಷದ ಜೂನ್‌ನಲ್ಲೂ ಸಹ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಚೀನಾದ ಟಿಕ್‌ಟಾಕ್‌, ವಿಚಾಟ್‌, ಹೆಲೋ ಸಿಟಿಂಗ್‌ 59 ಅಪ್ಲಿಕೇಷನ್‌ಗಳನ್ನು ನಿಷೇಧಿಸಲಾಗಿತ್ತು. ಮಾಜಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 69ಎ ಅಡಿಯಲ್ಲಿ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

2020ರ ಮೇನಲ್ಲಿ ಚೀನಾದೊಂದಿಗೆ ಗಡಿ ಉದ್ವಿಗ್ನತೆಯ ನಂತರ ಭಾರತದಲ್ಲಿ ಸುಮಾರು 300 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲಾಗಿದೆ. ಪೂರ್ವ ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ದಿನಗಳ ನಂತರ 2020ರ ಜೂನ್‌ನಲ್ಲಿ ಮೊದಲ ಸುತ್ತಿನ ನಿಷೇಧವನ್ನು ಘೋಷಿಸಲಾಗಿತ್ತು. ಇದನ್ನೂ ಓದಿ: ಅನ್ವೇಷಣೆಯ ಹಾದಿಯಲ್ಲಿ ಸೋಲಿಗೆ ಹೆದರಬೇಡಿ: ಯುವ ವಿಜ್ಞಾನಿ ಗೀತಾಂಜಲಿ ರಾವ್

Comments

Leave a Reply

Your email address will not be published. Required fields are marked *